ಬುಧವಾರ, ಜೂನ್ 16, 2021
28 °C
ಡಾಲ್ಫಿನ್ ಪಾರಮ್ಯ; ಮುಕ್ತ ಕೂಟದಲ್ಲಿ ನೀನಾ, ಅನೀಶ್‌, ಆದಿತ್ಯಗೆ ಪ್ರಥಮ ಸ್ಥಾನ

ಸಬ್‌ ಜೂನಿಯರ್ ಈಜು: ಶರಣ್, ಅಲಿಸಾಗೆ ಚಿನ್ನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಡಾಲ್ಫಿನ್ ಅಕ್ವಾಟಿಕ್ಸ್‌ನ ಅಲಿಸಾ ಸ್ವೀಡಲ್ ರೇಗೊ ಮತ್ತು ಮತ್ಸ್ಯ ಐಎನ್‌ಸಿಯ ಶರಣ್ ಶ್ರೀಧರ,  ಬುಧವಾರ ಕೊನೆಗೊಂಡ ರಾಜ್ಯ ಸಬ್‌ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ಚಿನ್ನದ ಸಂಭ್ರಮದಲ್ಲಿ ಮಿಂದರು.

ಪಡುಕೋಣೆ–ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನಲ್ಲಿ ನಡೆದ ಕೂಟದ ಬಾಲಕಿಯರ ಮತ್ತು ಬಾಲಕರ ಗುಂಪು–4ರ ಬಿ ವಿಭಾಗದ ತಲಾ ಐದು ಸ್ಪರ್ಧೆಗಳಲ್ಲಿ ಅಲಿಸಾ ಮತ್ತು ಶರಣ್ ಮೊದಲಿಗರಾದರು. ಅಖಿಲ ಭಾರತ ಆಹ್ವಾನಿತ ಕೂಟದ ಪುರುಷರ ವಿಭಾಗದಲ್ಲಿ ಡಾಲ್ಫಿನ್ ಅಕ್ವಾಟಿಕ್ಸ್‌ನ ಆದಿತ್ಯ ಡಿ, ಪೂಜಾ ಈಜುಕೇಂದ್ರದ ಅನೀಶ್ ಗೌಡ ಮತ್ತು ಮಹಿಳೆಯರ ವಿಭಾಗದಲ್ಲಿ ಡಾಲ್ಫಿನ್ ಅಕ್ವಾಟಿಕ್ಸ್‌ನ ನೀನಾ ವೆಂಕಟೇಶ್ ಚಿನ್ನ ಗೆದ್ದುಕೊಂಡರು.

ಫಲಿತಾಂಶಗಳು: ಸಬ್‌ಜೂನಿಯರ್ ಬಾಲಕರ ಗುಂಪು–4 ಬಿ 100 ಮೀಟರ್ಸ್‌ ಫ್ರೀಸ್ಟೈಲ್‌: ಶರಣ್ ಶ್ರೀಧರ (ಮತ್ಸ್ಯ ಐಎನ್‌ಸಿ)–1. ಕಾಲ: 1:12.94 ನಿ, ಅಥರ್ವ ಪಾಲ್ ಸಿಂಗ್ (ಗೋಲ್ಡನ್ ಫಿನ್ಸ್‌ ಸ್ಪೋರ್ಟ್ಸ್‌ ಕ್ಲಬ್)–2, ಶೌರ್ಯ ಎಸ್‌.ಶೆಟ್ಟಿ (ಡಾಲ್ಫಿನ್ ಅಕ್ವಾಟಿಕ್ಸ್‌)–3; 50 ಮೀ ಬ್ಯಾಕ್‌ಸ್ಟ್ರೋಕ್‌: ಶರಣ್ ಶ್ರೀಧರ (ಮತ್ಸ್ಯ)–1. ಕಾಲ: 37.78 ಸೆ, ಅಥರ್ವ ಪಾಲ್ (ಗೋಲ್ಡನ್‌)–2, ಅದ್ವೈತ ವಿ.ಎಂ (ಬಸವನಗುಡಿ ಈಜು ಕೇಂದ್ರ)–3; 50 ಮೀ ಬ್ರೆಸ್ಟ್‌ ಸ್ಟ್ರೋಕ್‌: ಅಥರ್ವ ಪಾಲ್‌ ಸಿಂಗ್ (ಗೋಲ್ಡನ್)–1. ಕಾಲ: 45.89 ಸೆ, ರೆಯಾಂಶ್ ಕಾಂತಿ (ಬಸವನಗುಡಿ)–2, ಶರಣ್ ಶ್ರೀಧರ (ಮತ್ಸ್ಯ)–3; 50 ಮೀ ಬಟರ್‌ಫ್ಲೈ: ಶರಣ್ ಶ್ರೀಧರ (ಮತ್ಸ್ಯ)–1. ಕಾಲ: 35.85 ಸೆ, ಅಥರ್ವ ಪಾಲ್ ಸಿಂಗ್ (ಗೋಲ್ಡನ್)–2, ದರ್ಶವೀರ್‌ ಸಿಂಗ್‌ (ಡಾಲ್ಫಿನ್)–3; 200 ಮೀ ಮೆಡ್ಲೆ: ಶರಣ್ ಶ್ರೀಧರ (ಮತ್ಸ್ಯ)–1. ಕಾಲ: 3:00.59 ನಿ, ಅಥರ್ವ ಪಾಲ್‌ ಸಿಂಗ್ (ಗೋಲ್ಡನ್‌)–2, ದರ್ಶವೀರ್‌ ಸಿಂಗ್ (ಡಾಲ್ಫಿನ್‌)–3; 50 ಮೀ ಫ್ರೀಸ್ಟೈಲ್‌: ಶರಣ್ ಶ್ರೀಧರ (ಮತ್ಸ್ಯ)–1. ಕಾಲ: 33.46 ಸೆ, ಸಮರ್ಥ್ ಗೌಡ (ಸ್ವಿಮ್ ಲೈಫ್ ಅಕಾಡೆಮಿ)–2, ಶೌರ್ಯ ಶೆಟ್ಟಿ (ಡಾಲ್ಫಿನ್‌)–3. ಬಾಲಕಿಯರ 100 ಮೀ ಫ್ರೀಸ್ಟೈಲ್‌: ಅಲಿಸಾ ಸ್ವೀಡಲ್ ರೇಗೊ (ಡಾಲ್ಫಿನ್)–1. ಕಾಲ: 1:14.94 ನಿ, ಮೀರಾ ನಂಬಿಯಾರ್ (ಡಾಲ್ಫಿನ್)–2, ತ್ರಿಶಾ ಸಿಂಧು (ಡಿಕೆವಿ ಅಕ್ವಾಟಿಕ್ ಕೇಂದ್ರ)–3; 50 ಮೀ ಬ್ರೆಸ್ಟ್‌ ಸ್ಟ್ರೋಕ್: ಅಲಿಸಾ ಸ್ವೀಡನ್ ರೇಗೊ (ಡಾಲ್ಫಿನ್)–1. ಕಾಲ: 43.19 ಸೆ, ಮಿನರ್ವ (ಅತಿಥಿ–ಚಾಂಪಿಯನ್‌ ಈಜುಕೇಂದ್ರ)–2, ಶೆಲಿನ್ ಸುನಿಲ್ (ಡಾಲ್ಫಿನ್)–3; 50 ಮೀ ಬ್ರೆಸ್ಟ್‌ ಸ್ಟ್ರೋಕ್: ಧ್ವಜ ಜೈನ್ (ಅತಿಥಿ–ಚಾಂಪಿಯನ್)–1. ಕಾಲ: 46.40 ಸೆ, ಶೆಲಿನ್ ಸುನಿಲ್ (ಡಾಲ್ಫಿನ್)–2, ಶಿವಾನಿ ಶೆಣೈ (ಬಸವನಗುಡಿ)–3; 50 ಮೀ ಬಟರ್‌ಫ್ಲೈ: ಅಲಿಸಾ ಸ್ವೀಡ‌ಲ್ ರೇಗೊ (ಡಾಲ್ಫಿನ್)–1. ಕಾಲ: 37.97 ಸೆ, ಅಮೋಲಿ ನೇರಳೇಕರ್ (ಅತಿಥಿ–ಚಾಂಪಿಯನ್)–2, ಪವನ್ ಡಿ (ಪೂಜಾ)–3; 200 ಮೀ ಮೆಡ್ಲೆ: ಅಲಿಸಾ ಸ್ವೀಡಲ್ ರೇಗೊ (ಡಾಲ್ಫಿನ್)–1. ಕಾಲ: 3:16.85 ನಿ, ಸೆಲಿನ್ ಸುನಿಲ್ (ಡಾಲ್ಫಿನ್)–2, ಧ್ವಜ ಜೈನ್ (ಅತಿಥಿ–ಚಾಂಪಿಯನ್‌)–3; 50 ಮೀ ಫ್ರೀಸ್ಟೈಲ್: ಅಲಿಸಾ ಸ್ವೀಡಲ್ ರೇಗೊ (ಡಾಲ್ಫಿನ್)–1. ಕಾಲ: 34.2 ಸೆ, ತ್ರಿಶಾ ಸಿಂಧು (ಡಿಕೆವಿ)–2, ಮೀರಾ ನಂಬಿಯಾರ್ (ಡಾಲ್ಫಿನ್)–3. ಅಖಲ ಭಾರತ ಮುಕ್ತ ಕೂಟ (ಕರ್ನಾಟಕದ ಫಲಿತಾಂಶ ಮಾತ್ರ): ಪುರುಷರ 200 ಮೀ ಬ್ರೆಸ್ಟ್‌ಸ್ಟ್ರೋಕ್: ಧನುಷ್ ಎಸ್‌ (ಡಾಲ್ಫಿನ್)–2, ವಿದಿತ್ ಶಂಕರ್ (ಡಾಲ್ಫಿನ್)–3; 50 ಮೀ ಫ್ರೀಸ್ಟೈಲ್: ಆದಿತ್ಯ ಡಿ (ಡಾಲ್ಫಿನ್)–1. ಕಾಲ: 23.68 ಸೆ, ವಿಕಾಸ್ ಪಿ (ಡಾಲ್ಫಿನ್)–3; 1500 ಮೀ ಫ್ರೀಸ್ಟೈಲ್: ಅನೀಶ್ ಎಸ್‌.ಗೌಡ (ಪೂಜಾ)–1. ಕಾಲ: 16:29.83 ನಿ, ಪವನ್ (ಪೂಜಾ)–3; 50 ಮೀ ಬಟರ್‌ಫ್ಲೈ: ಆದಿತ್ಯ ಡಿ (ಡಾಲ್ಫಿನ್)–1. ಕಾಲ: 25.6 ಸೆ. ಮಹಿಳೆಯರ 1500 ಮೀ ಫ್ರೀಸ್ಟೈಲ್‌: ಶಿರೀನ್ (ಪೂಜಾ ಈಜುಕೇಂದ್ರ)–2, ಋತಿಕಾ ಬಿ.ಎಂ (ಪೂಜಾ)–3; 200 ಮೀ ಬ್ರೆಸ್ಟ್‌ಸ್ಟ್ರೋಕ್: ಎಸ್‌.ಲಕ್ಷ್ಯ (ಪೂಜಾ)–3; 50 ಮೀ ಬಟರ್‌ಫ್ಲೈ: ನೀನಾ ವೆಂಕಟೇಶ್‌ (ಡಾಲ್ಫಿನ್)–1. ಕಾಲ: 28.75 ಸೆ, ದಿವ್ಯಾ (ಡಾಲ್ಫಿನ್)–2.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು