ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಭುಲ್ಲರ್, ಶರ್ಮಾಗೆ ನಿರಾಸೆ

Last Updated 6 ಜುಲೈ 2019, 19:45 IST
ಅಕ್ಷರ ಗಾತ್ರ

ಲಾಹಿಂಚ್, ಐರ್ಲೆಂಡ್: ಭಾರತದ ಗಗನ್‌ಜೀತ್ ಭುಲ್ಲರ್, ಶುಭಂಕರ್ ಶರ್ಮಾ ಮತ್ತು ಎಸ್‌ಎಸ್‌ಪಿ ಚೌರಾಸಿಯಾ ಇಲ್ಲಿ ನಡೆಯುತ್ತಿರುವ ಐರಿಷ್‌ ಓಪನ್‌ ಗಾಲ್ಫ್ ಟೂರ್ನಿಯಲ್ಲಿ ಶನಿವಾರ ನಿರಾಸೆ ಅನುಭವಿಸಿದ್ದಾರೆ.

ಅಮೋಘ ಆರಂಭ ಕಂಡ ಭುಲ್ಲರ್ ನಂತರ ನೀರಸ ಆಟ ಆಡಿದರು. ಎರಡನೇ ಸುತ್ತಿನಲ್ಲಿ ಅವರಿಂದ ಗಮನಾರ್ಹ ಸಾಧನೆ ಕಂಡುಬರಲಿಲ್ಲ. ಶರ್ಮಾ ಮತ್ತು ಚೌರಾಸಿಯಾ ಅವರಿಗೆ ಮೊದಲೆರಡು ಸುತ್ತುಗಳಲ್ಲೂ ನಿರೀಕ್ಷಿತ ಸಾಮರ್ಥ್ಯ ತೋರಲಾಗಲಿಲ್ಲ.

ಮೂರನೇ ದಿನವಾದ ಶನಿವಾರ ರಾಬರ್ಟ್ ರಾಕ್ ಮಿಂಚಿದರು. 2012ರಲ್ಲಿ ಅಬು ಧಾಬಿ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದ ಅವರು ಇಲ್ಲಿ ಚಾಂಪಿಯನ್‌ ಆಗುವತ್ತ ಹೆಜ್ಜೆ ಹಾಕಿದ್ದಾರೆ. ಜಾನ್ ರಾಹ್ಮ್ ನಾಲ್ಕನೇ ಸ್ಥಾನದಲ್ಲಿದ್ದು ರಾಫ ಕಾಬ್ರೆರಾ ಬೆಲೊ ಮತ್ತು ಬೆರ್ನಾರ್ಡ್‌ ವೀಸ್‌ಬರ್ಗ್‌ ಮುಂದಿನ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT