ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

New Year Resolution| ಟಾಪ್ 50ರಲ್ಲಿ ಸೇರುವಾಸೆ: ಗಾಲ್ಫ್ ಆಟಗಾರ್ತಿ ಆವನಿ

Last Updated 31 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮುಂಬರುವ ಒಂದು ವರ್ಷವು ನನ್ನ ಕ್ರೀಡಾ ಜೀವನದ ಮಹತ್ವದ ಕಾಲಘಟ್ಟವಾಗಿದೆ. ಇದುವರೆಗಿನ ನನ್ನ ಪಯಣ ಅತ್ಯುತ್ತಮವಾಗಿದೆ. ಮುಂದಿನ ವರ್ಷದಲ್ಲಿ ಮೂರು ಗುರಿಗಳನ್ನು ಸಾಧಿಸುವುದಿದೆ.

ಮೊದಲನೆಯದಾಗಿ; ಗಾಲ್ಫ್ ಕ್ರೀಡೆಯಲ್ಲಿ ಪ್ರೊಫೆಷನಲ್ ಮೇಜರ್‌ ಟೂರ್ನಿಗಳನ್ನು ಆಡುವುದು. ಇದು ಬಹಳ ಕ್ಲಿಷ್ಟವಾದ ಸವಾಲು. ಆದರೆ ಇದನ್ನು ಸಾಧಿಸುವ ಛಲ ಮತ್ತು ವಿಶ್ವಾಸವಿದೆ. ಮಹಿಳೆಯರ ವಿಭಾಗದಲ್ಲಿ ನಾಲ್ಕು ಮೇಜರ್ ಟೂರ್ನಿಗಳಿವೆ. ಮುಂದಿನ ಮೂರು ತಿಂಗಳಲ್ಲಿ ನಡೆಯುವ ಅಮೇಚೂರ್ ಟೂರ್ನಿಗಳಲ್ಲಿರುವ ಕಠಿಣ ಸವಾಲು ಮೀರಿ ನಿಲ್ಲಬೇಕು. ಆಗ ಮೇಜರ್ ಆಡುವ ಅವಕಾಶ ಸಿಗಲಿದೆ. ಕನಿಷ್ಠ ಒಂದಾದರೂ ಮೇಜರ್ ಟೂರ್ನಿ ಆಡಲೇಬೇಕು.

ಎರಡನೆಯದಾಗಿ; ಮುಂದಿನ ವರ್ಷದಲ್ಲಿ ಮೂರು ಲೇಡಿಸ್ ಯುರೋಪಿಯನ್ ಟೂರ್ನಿಗಳಲ್ಲಿ ಆಡಲಿದ್ದೇನೆ. ಅದರಲ್ಲಿ ಒಂದರಲ್ಲಿ ಗೆಲ್ಲಬೇಕು. ಇನ್ನೊಂದು ಕ್ವಾಲಿಫೈಯರ್ ಇದೆ. ಅದರ ಮೂಲಕ ಎಲ್‌ಜಿಟಿಗೆ ಪ್ರವೇಶಿಸಬೇಕು. ಆದರೆ ಈ ಟೂರ್ನಿಗಳಲ್ಲಿ ಅತ್ಯಂತ ಕಠಿಣ ಸ್ಪರ್ಧೆ ಇದೆ. ಬಹಳ ನುರಿತ ಪ್ರತಿಸ್ಪರ್ಧಿಗಳು ಇದ್ದಾರೆ.

ಮೂರನೆಯದಾಗಿ; ಅಮೇಚೂರ್ ಮಹಿಳೆಯರ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 50ರಲ್ಲಿ ಸ್ಥಾನ ಗಳಿಸಬೇಕು. ಸದ್ಯ 106ನೇ ರ‍್ಯಾಂಕಿಂಗ್‌ನಲ್ಲಿದ್ದೇನೆ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಿದ್ದೇನೆ. ಸಮರ್ಪಣಾಭಾವದಿಂದ ಅಭ್ಯಾಸ ಮಾಡುತ್ತಿದ್ದೇನೆ. ಸತತ ಟೂರ್‌ಗಳಲ್ಲಿ ಸಾಧನೆ ಮಾಡುತ್ತಿದ್ದೇನೆ.

ಆನ್‌ಲೈನ್‌ ಮೂಲಕ ಮಾರ್ಗದರ್ಶನ ನೀಡುತ್ತಿರುವ ಇಂಗ್ಲೆಂಡ್‌ ದೇಶದ ಕೋಚ್ ಲಾರೆನ್ಸ್‌ ಬ್ರದರ್‌ಇಜ್ ಮತ್ತು ಬೆಂಗಳೂರಿನಲ್ಲಿ ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ಕೋಚ್ ಆಗಿರುವ ಡೆಕ್ಲೈನ್ ಲಿಟಾವೊ ಅವರ ಸಹಕಾರ ಬಹಳಷ್ಟಿದೆ.

– ಆವನಿ ಪ್ರಶಾಂತ್‌ ( ನಿರೂಪಣೆ: ಗಿರೀಶ ದೊಡ್ಡಮನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT