ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗ್ರೆಬ್‌ ಚಾಂಪಿಯನ್‌ಷಿಪ್‌: ಕುಸ್ತಿ ತಂಡಕ್ಕೆ ಅನುಮತಿ

Last Updated 26 ಜನವರಿ 2023, 13:30 IST
ಅಕ್ಷರ ಗಾತ್ರ

ನವದೆಹಲಿ: ಕ್ರೊವೇಷ್ಯದ ಜಗ್ರೆಬ್‌ನಲ್ಲಿ ಫೆ. 1 ರಿಂದ 5ರ ವರೆಗೆ ನಡೆಯಲಿರುವ ಜಗ್ರೆಬ್‌ ಓಪನ್‌ ಗ್ರ್ಯಾನ್‌ ಪ್ರಿ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಭಾರತದ 55 ಸದಸ್ಯರ ಕುಸ್ತಿ ತಂಡಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಭಾರತ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಆಡಳಿತ ನೋಡಿಕೊಳ್ಳಲು ಕ್ರೀಡಾ ಸಚಿವಾಲಯ ನೇಮಿಸಿರುವ ಮೇಲುಸ್ತುವಾರಿ ಸಮಿತಿಯು ಭಾರತದ ಗ್ರೀಕೊ ರೋಮನ್‌ ಮತ್ತು ಫ್ರೀಸ್ಟೈಲ್‌ ಕುಸ್ತಿ ತಂಡವನ್ನು ಆಯ್ಕೆ ಮಾಡಿದೆ.

ಬಜರಂಗ್‌ ಪೂನಿಯಾ, ವಿನೇಶಾ ಪೋಗಟ್‌, ರವಿ ಕುಮಾರ್‌ ದಹಿಯಾ, ಅನ್ಶು ಮಲಿಕ್‌ ಮತ್ತು ದೀಪಕ್‌ ಪೂನಿಯಾ ಅವರು ತಂಡದಲ್ಲಿದ್ದಾರೆ ಎಂದು ಕ್ರೀಡಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಕುಸ್ತಿ ಪಟುಗಳ ಎಲ್ಲ ವೆಚ್ಚವನ್ನು ಸರ್ಕಾರವರೇ ಭರಿಸಲಿದೆ.

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್ ಸಿಂಗ್‌ ಅವರಿಗೆ ಫೆಡರೇಷನ್‌ನ ಎಲ್ಲ ಚಟುವಟಿಕೆಗಳಿಂದ ದೂರವಿರುವಂತೆ ಕ್ರೀಡಾ ಸಚಿವಾಲಯ ಸೂಚಿಸಿತ್ತು. ಮಹಿಳಾ ಬಾಕ್ಸರ್‌ ಎಂ.ಸಿ.ಮೇರಿ ಕೋಮ್ ನೇತೃತ್ವದ ಸಮಿತಿಯು ಫೆಡರೇಷನ್‌ನ ಆಡಳಿತ ನೋಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT