ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿಪಟು ವಿನೇಶಾ ಪೋಗಟ್‌ ತರಬೇತಿಗೆ ಅವಕಾಶ

Last Updated 25 ಡಿಸೆಂಬರ್ 2020, 12:35 IST
ಅಕ್ಷರ ಗಾತ್ರ

ನವದೆಹಲಿ: ಮಹಿಳಾ ಕುಸ್ತಿಪಟು ವಿನೇಶಾ ಪೋಗಟ್‌ ಅವರು ಹಂಗರಿಯಲ್ಲಿ ತರಬೇತಿ ಪಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ತಮ್ಮ ಕೋಚ್‌ ವೊಲ್ಲರ್‌ ಅಕೊಸ್‌, ಅಭ್ಯಾಸದ ಜೊತೆಗಾರ್ತಿ ಪ್ರಿಯಾಂಕಾ ಪೋಗಟ್ ಹಾಗೂ ಫಿಸಿಯೊ ಪೂರ್ಣಿಮಾ ರಮಣ್‌ ನಾಮ್‌ದಿರ್ ಅವರೊಂದಿಗೆ ತೆರಳಲು ವಿನೇಶಾ ಅವರಿಗೆ ಅನುಮತಿ ನೀಡಿದ್ದು, ಇದಕ್ಕಾಗಿ ₹ 15.51 ಲಕ್ಷ ಅನುದಾನ ಮಂಜೂರು ಮಾಡಿದೆ.

ಸರ್ಕಾರದ ಟಾರ್ಗೆಟ್ ಒಲಿಂಪಿಕ್‌ ಪೋಡಿಯಂ ಯೋಜನೆಯಡಿ (ಟಾಪ್ಸ್) ವಿನೇಶಾ ಅವರಿಗೆ ಈ ಅವಕಾಶ ನೀಡಲಾಗಿದೆ. ಮೊದಲ ಹಂತದ ತರಬೇತಿ ಶಿಬಿರವು ಬುಡಾಪೆಸ್ಟ್‌ನ ವಾಸಾಸ್‌ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಡಿಸೆಂಬರ್ 28ರಿಂದ 24ರವರೆಗೆ ನಡೆಯಲಿದ್ದು, ಬಳಿಕ ಜನವರಿ 24ರಿಂದ ಫೆಬ್ರುವರಿ 5ರವರೆಗೆ ಎರಡನೇ ಹಂತದ ಶಿಬಿರವು ಪೋಲೆಂಡ್‌ನ ಒಲಿಂಪಿಕ್‌ ತರಬೇತಿ ಕೇಂದ್ರದಲ್ಲಿ ಆಯೋಜನೆಯಾಗಿದೆ.

ತರಬೇತಿಗೆ ಮಂಜೂರಾದ ಹಣದಿಂದ ವಿಮಾನ ಟಿಕೆಟ್‌, ಸ್ಥಳೀಯ ಸಾರಿಗೆ, ವಸತಿ ವ್ಯವಸ್ಥೆಯ ವೆಚ್ಚಗಳನ್ನು ಭರಿಸಲಾಗುತ್ತದೆ.

‘ಕುಸ್ತಿಪಟುವಾಗಿ ನನ್ನ ಸಾಮರ್ಥ್ಯ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಖ್ಯಾತ ಕುಸ್ತಿಪಟುಗಳೊಂದಿಗೆ ಅಭ್ಯಾಸ ನಡೆಸಬೇಕಾಗುತ್ತದೆ. ಅದಕ್ಕಾಗಿ ತರಬೇತಿ ಶಿಬಿರವನ್ನು ಎದುರು ನೋಡುತ್ತಿದ್ದೇನೆ‘ ಎಂದು ವಿನೇಶಾ ಹೇಳಿದ್ದಾರೆ.

2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಿನೇಶಾ ಅವರು 2021ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT