ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 1ರಿಂದ ಗ್ರ್ಯಾನ್‌ಪ್ರೀ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್

ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ತಾರೆಗಳ ತೋಟ; ನೂತನ ಟೂರ್ನಿಗೆ ವೇದಿಕೆ ಸಿದ್ಧ
Last Updated 4 ಜೂನ್ 2022, 15:24 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಬ್ಯಾಡ್ಮಿಂಟನ್ ಕ್ರೀಡೆಯ ಶ್ರೀಮಂತ ಪರಂಪರೆಗೆ ಗ್ರ್ಯಾನ್‌ಪ್ರೀಬ್ಯಾಡ್ಮಿಂಟನ್ಲೀಗ್ ಸೇರಲಿದೆ.

ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಿಬಿಎಲ್‍‌ನಲ್ಲಿ ಭಾಗವಹಿಸುವ ತಂಡಗಳ ಪೋಷಾಕು ಮತ್ತು ಟೂರ್ನಿಯ ಟ್ರೋಫಿಯನ್ನು ಬಿಡುಗಡೆ ಮಾಡಲಾಯಿತು.

ಜುಲೈ 1ರಿಂದ ಹತ್ತು ದಿನಗಳವರೆಗೆ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಟೂರ್ನಿ ನಡೆಯಲಿದೆ. ಒಟ್ಟು ಎಂಟು ತಂಡಗಳು ಸ್ಪರ್ಧಿಸಲಿವೆ. ಈ ತಂಡಗಳಲ್ಲಿ ಆಡುವ ಆಟಗಾರರ ಆಯ್ಕೆಗಾಗಿ ಮುಂದಿನ ವಾರ ಬಿಡ್ ಪ್ರಕ್ರಿಯೆ ನಡೆಯಲಿದೆ. ಈ ತಂಡಗಳ ಪ್ರಚಾರ ರಾಯಭಾರಿಗಳಾದ ಪಿ.ವಿ. ಸಿಂಧು, ಕಿಡಂಬಿ ಶ್ರೀಕಾಂತ್, ಸಾಯಿ ಪ್ರಣೀತ್, ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ಚಿರಾಗ್ ಶೆಟ್ಟಿ, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಎಚ್‌.ಎಸ್. ಪ್ರಣಯ್ ಅವರು ಪೋಷಾಕುಗಳನ್ನು ಬಿಡುಗಡೆ ಮಾಡಿದರು.

ಟ್ರೋಫಿಯನ್ನು ಅನಾವರಣಗೊಳಿಸಿದ ಬೆಂಗಳೂರು ಲಯನ್ಸ್‌ ತಂಡದ ಸಹ ಮಾಲೀಕರೂ ಆಗಿರುವ ಒಲಿಂಪಿಯನ್ ಪಿ.ವಿ. ಸಿಂಧು, ‘ಈ ತರಹದ ಲೀಗ್‌ ಟೂರ್ನಿಗಳಿಂದ ಆಯಾ ಕ್ರೀಡೆಗಳ ಮೇಲೆ ಆಗಿರುವ ಪ್ರಭಾವವನ್ನು ನಾವು ನೋಡಿದ್ಧೇವೆ. ಇಂತಹ ವೇದಿಕೆಗಳಿಂದಲೇ ನೂತನ ಪ್ರತಿಭೆಗಳನ್ನು ಶೋಧ ಮಾಡಲು ಸಾಧ್ಯ. ಅವರನ್ನು ಪ್ರೋತ್ಸಾಹಿಸಿ ಭವಿಷ್ಯದ ತಾರೆಗಳನ್ನು ಬೆಳೆಸಲು ಸಾಧ್ಯ. ಜಿಪಿಬಿಎಲ್‌ನ ಭಾಗವಾಗಿರುವುದರಿಂದ ಅತ್ಯಂತ ಸಂತಸಗೊಂಡಿದ್ದೇನೆ’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಲೀಗ್ ನಿರ್ದೇಶಕರೂ ಆಗಿರುವ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಅರವಿಂದ್ ಭಟ್, ‘ಬ್ಯಾಡ್ಮಿಂಟನ್‌ನಲ್ಲಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುವವರೆಗೂ ಹಣ ಗಳಿಕೆ ಸಾಧ್ಯವಿಲ್ಲ. ಆದರೆ ಆ ಮಟ್ಟಕ್ಕೆ ಏರಲು ಬಹಳಷ್ಟು ಹಣ ಖರ್ಚಾಗುತ್ತದೆ. ಇದರಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಈ ಕ್ರೀಡೆಯತ್ತ ಕಳಿಸಲು ಹತ್ತಾರು ಬಾರಿ ಯೋಚಿಸುವಂತಾಗಿದೆ. ಜೂನಿಯರ್ ಮತ್ತು ಯೂತ್ ಹಂತದ ಪ್ರತಿಭೆಗಳಿಗೆ ಇಂತಹ ಲೀಗ್‌ಗಳಲ್ಲ ಅವಕಾಶ ಸಿಕ್ಕರೆ, ಒಂದಿಷ್ಟು ಹಣವೂ ಲಭಿಸುತ್ತದೆ. ಅದನ್ನು ಅವರು ತಮ್ಮ ಬೆಳವಣಿಗೆಗೆ ವಿನಿಯೋಗಿಸಲು ದಾರಿಯಾಗುತ್ತದೆ. ಈ ಲೀಗ್‌ ಹಿಂದಿನ ಮುಖ್ಯ ಧ್ಯೇಯವೂ ಇದೇ ಆಗಿದೆ’ ಎಂದರು.

ಟೂರ್ನಿಯ ಮಾದರಿ:
ರೌಂಡ್‌ ರಾಬಿನ್ ಲೀಗ್ ಮಾದರಿಯಲ್ಲಿ ಟೂರ್ನಿಯು ನಡೆಯಲಿದೆ. ಅಗ್ರ ನಾಲ್ಕು ತಂಡಗಳು ಡಬಲ್ ಎಲಿಮಿನೇಷನ್ ಹಂತ (ಸೆಮಿಫೈನಲ್) ಪ್ರವೇಶಿಸುತ್ತವೆ. ಗುಂಪು ವಿಭಾಗದಲ್ಲಿ ಪ್ರತಿ ತಂಡವೂ ಐದು ಪಂದ್ಯಗಳಲ್ಲಿ ಆಡಲಿದೆ. ಪುರುಷರ ಸಿಂಗಲ್ಸ್‌, ಮಹಿಳೆಯರ ಸಿಂಗಲ್ಸ್‌, ಮಿಶ್ರ ಡಬಲ್ಸ್‌, ಪುರುಷರ ಡಬಲ್ಸ್ ಮತ್ತು ಸೂಪರ್ ಮ್ಯಾಚ್ ಇರಲಿದೆ. ಇದರಲ್ಲಿ ಟ್ರಂಪ್ ಮ್ಯಾಚ್ ಕೂಡ ಇರಲಿದೆ. ಗೋಲ್ಡನ್ ಪಾಯಿಂಟ್ ಕೂಡ ನೀಡಲಾಗುವುದು.

ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲು ಮುಂದಿನ ವಾರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ರಾಜ್ಯದ ಬೇರೆ ಬೇರೆ ಕಡೆಗಳಿಂದ 400 ಮಂದಿ ಹೆಸರು ನೋಂದಾಯಿಸಿಕೊಂಡಿದ್ಧಾರೆ.

ಪ್ರತಿ ತಂಡದಲ್ಲಿಯೂ ಹತ್ತು ಆಟಗಾರರನ್ನು ಸೇರ್ಪಡೆ ಮಾಡಿಕೊಳ್ಳುವ ಅವಕಾಶ ಫ್ರ್ಯಾಂಚೈಸಿಗಳಿಗೆ ಇದೆ.

ಪಟ್ಟಿ

ತಂಡ; ರಾಯಭಾರಿ

ಬೆಂಗಳೂರು ಲಯನ್ಸ್;ಪಿ.ವಿ. ಸಿಂಧು

ಮಲ್ನಾಡ್ ಫಾಲ್ಕನ್ಸ್‌;ಚಿರಾಗ್ ಶೆಟ್ಟಿ

ಬಂಡಿಪುರ ಟಸ್ಕರ್ಸ್;ಜ್ವಾಲಾ ಗುಟ್ಟಾ

ಮೈಸೂರು ಪ್ಯಾಂಥರ್ಸ್;ಸಾತ್ವಿಕ್ ಸಾಯಿರಾಜ್

ಕೊಡವ ಟೈಗರ್ಸ್;ಅಶ್ವಿನಿ ಪೊನ್ನಪ್ಪ

ಮಂಡ್ಯ ಬುಲ್ಸ್;ಸಾಯಿ ಪ್ರಣೀತ್

ಕೆಜಿಎಫ್‌ ವೂಲ್ಫ್ಸ್;ಎಚ್‌.ಎಸ್‌. ಪ್ರಣಯ್

ಮಂಗಳೂರು ಶಾರ್ಕ್ಸ್‌; ಕೆ. ಶ್ರೀಕಾಂತ್

--

ಪ್ರಶಸ್ತಿ ಮೊತ್ತ

ಸ್ಥಾನ;ಮೊತ್ತ (₹ ಲಕ್ಷ)

ವಿಜೇತ;24

ರನ್ನರ್ಸ್ ಅಪ್;12

ಸೆಮಿಫೈನಲ್;6

5ನೇ; 4

6ನೇ;3

7ನೇ;2

8ನೇ;1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT