ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಗುಕೇಶ್‌ಗೆ ಸೋಲು

Last Updated 23 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅತಿ ಕಿರಿಯ ಗ್ರ್ಯಾಂಡ್‌ ಮಾಸ್ಟರ್‌ ಡಿ.ಗುಕೇಶ್ ಅವರು ದೆಹಲಿ ಅಂತರರಾಷ್ಟ್ರೀಯ ಮುಕ್ತ ಚೆಸ್ ಟೂರ್ನಿಯಲ್ಲಿ ಆಘಾತ ಅನುಭವಿಸಿದರು. ಬುಧವಾರ ಅವರು ಶ್ರೀಲಂಕಾದ ರಾಣಿಂದು ಲಿಯಾನಗೆ ಎದುರು ಸೋತರು.

ಎರಡನೇ ಶ್ರೇಯಾಂಕದ ರಷ್ಯಾ ಆಟಗಾರ ಪವೆಲ್ ಪೊಂಕ್ರಟೊವ್, ಮೂರನೇ ಶ್ರೇಯಾಂಕಿತ ಹಾಲಿ ಚಾಂಪಿಯನ್ ಅಭಿಜೀತ್ ಗುಪ್ತಾ ಮತ್ತು ನಾಲ್ಕನೇ ಶ್ರೇಯಾಂಕದ ಪರಾಗ್ವೆ ಆಟಗಾರ ನ್ಯೂರಿಸ್ ಡೆಲ್ಗಾಡೊ ಅವರು ತಮಗಿಂತ ಕಡಿಮೆ ಶ್ರೇಯಾಂಕದ ಆಟಗಾರರ ಎದುರು ಡ್ರಾಗೆ ಮಣಿದರು.

ಅಗ್ರ ಶ್ರೇಯಾಂಕದ ಅರ್ಜುನ್ ಎರಿಗೈಸಿ ಗ್ರ್ಯಾಂಡ್‌ಮಾಸ್ಟರ್ ಪಿ. ಕಾರ್ತಿಕೇಯನ್‌ಗೆ ಸೋಲುಣಿಸಿದರು. ಇದು ಅವರ ಸತತ ಎರಡನೇ ಜಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT