ಮಂಗಳವಾರ, ನವೆಂಬರ್ 12, 2019
19 °C
ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌

ಹೋರಾಡಿ ಸೋತ ಗುರುಪ್ರೀತ್‌

Published:
Updated:

ನೂರ್‌ ಸುಲ್ತಾನ್‌, ಕಜಕಸ್ತಾನ(ಪಿಟಿಐ): ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಗುರುಪ್ರೀತ್‌ ಉತ್ತಮ ಸಾಮರ್ಥ್ಯ ತೋರಿದರು. 77 ಕೆಜಿ ವಿಭಾಗದ ಬೌಟ್‌ನಲ್ಲಿ ಅವರು ವಿಶ್ವ ಕುಸ್ತಿಯಲ್ಲಿ ಎರಡನೇ ಸ್ಥಾನದಲ್ಲಿರುವ ವಿಕ್ಟರ್‌ ನೆಮೆಸ್‌ ವಿರುದ್ಧ ಸೋಮವಾರ ಸೋತರು. ಆದರೆ ಭಾರತದ ಪಟುವಿನ ಪ್ರದರ್ಶನ ಗಮನಸೆಳೆಯಿತು.

ಗುರುಪ್ರೀತ್‌ ಅವರು 2017ರ ವಿಶ್ವ ಚಾಂಪಿಯನ್‌, ಸೆರ್ಬಿಯಾ ಆಟಗಾರನ ವಿರುದ್ಧ ಆರಂಭದಲ್ಲಿ 1–0 ಮುನ್ನಡೆ ಪಡೆದಿದ್ದರು. ಮೊದಲಾರ್ಧ ಮುಗಿಯುವವರೆಗೆ ಮುನ್ನಡೆಯನ್ನು ಕಾಯ್ದುಕೊಂಡಿದ್ದರು. ಎರಡನೇ ಅವಧಿಯಲ್ಲಿ ಪಾಯಿಂಟ್‌ವೊಂದನ್ನು ಬಿಟ್ಟುಕೊಟ್ಟರೂ ಗುರುಪ್ರೀತ್‌ ಹೆಚ್ಚು ನಷ್ಟವಾಗದಂತೆ ನೋಡಿಕೊಂಡರು.

ಈ ಹಂತದಲ್ಲಿ ಗುರುಪ್ರೀತ್‌ ಅವರನ್ನು ವಿಕ್ಟರ್‌ ಮ್ಯಾಟ್‌ನ ಆಚೆಗೆ ತಳ್ಳಲು ಯತ್ನಿಸಿದರು. ಸೆರ್ಬಿಯ ಆಟಗಾರ ಆಯ ತಪ್ಪಿ ಗುರುಪ್ರೀತ್‌ ಅವರೊಂದಿಗೆ ವೃತ್ತದ ತುದಿಯ ಹತ್ತಿರ ಬಿದ್ದರೂ ರೆಫರಿ ವಿಕ್ಟರ್‌ಗೆ ಎರಡು ಅಂಕ ನೀಡಿದರು. ಭಾರತದ ಕೋಚ್‌ ಹರ್‌ಗೋವಿಂದ್‌ ಇದನ್ನು ಪ್ರಶ್ನಿಸಿದರು. ಪರಿಣಾಮ ಗುರುಪ್ರೀತ್‌ ಮತ್ತೊಂದು ಪಾಯಿಂಟ್‌ ಕಳೆದುಕೊಂಡರು. ವಿಕ್ಟರ್‌ ಮುಂದಿನ ಸುತ್ತಿಗೆ ಮುನ್ನಡೆದರು.

ಇದಕ್ಕೂ ಮೊದಲು ಗುರುಪ್ರೀತ್‌, ಆಸ್ಟ್ರಿಯದ ಮಿಚೆಲ್‌ ವ್ಯಾಗ್ನರ್‌ ವಿರುದ್ಧ ಗೆಲುವು ಕಂಡಿದ್ದರು. 60 ಕೆಜಿ ವಿಭಾಗದಲ್ಲಿ ಮನೀಷ್‌ ಅವರು ಮೊಲ್ಡೊವಾದ ವಿಕ್ಟರ್‌ ಸಿಯೊಬಾನು ವಿರುದ್ಧ ಸೋತರು. 130 ಕೆಜಿ ಬೌಟ್‌ನಲ್ಲಿ ನವೀನ್‌, ಕ್ಯೂಬಾದ ಆಸ್ಕರ್‌ ಪಿನೊ ಹಿಂಡ್ಸ್ ಎದುರು ಮಣಿದರು.

ಪ್ರತಿಕ್ರಿಯಿಸಿ (+)