ಗುರುವಾರ , ನವೆಂಬರ್ 21, 2019
23 °C
ವಿಶ್ವ ಜಿಮ್ನಾಸ್ಟಿಕ್‌ ಚಾಂಪಿಯನ್‌ಷಿಪ್‌: ಬ್ಯಾಲನ್ಸ್ ಬೀಮ್ಸ್ ವಿಭಾಗದಲ್ಲಿ ಚಿನ್ನ

ಜಿಮ್ನಾಸ್ಟಿಕ್‌: ಸಿಮೊನ್‌ಗೆ ದಾಖಲೆ 25ನೇ ಪದಕ

Published:
Updated:

ಸ್ಟುಟ್‌ಗಾರ್ಟ್‌: ಅಮೆರಿಕದ ಸಿಮೊನ್‌ ಬೈಲ್ಸ್ ಅವರು ವಿಶ್ವ ಜಿಮ್ನಾಸ್ಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ 25ನೇ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು ಜಿಮ್ನಾಸ್ಟಿಕ್‌ ಇತಿಹಾಸದಲ್ಲಿ ಗರಿಷ್ಠ ಪದಕ ಗಳಿಸಿದ ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡರು.

ಭಾನುವಾರ ಚಾಂಪಿಯನ್‌ಷಿಪ್‌ನ ಬ್ಯಾಲನ್ಸ್‌ ಬೀಮ್‌ ಹಾಗೂ ಫ್ಲೋರ್‌ ಎಕ್ಸರ್‌ಸೈಜ್‌ ವಿಭಾಗಗಳಲ್ಲಿ ಎರಡು ಚಿನ್ನ ಪದಕಗಳನ್ನು ಗೆದ್ದರು.

ಈ ವಾರ ಅವರು ಐದನೇ ಚಿನ್ನ ಗಳಿಸಿದರು. ಬ್ಯಾಲನ್ಸ್ ಬೀಮ್‌ ವಿಭಾಗದಲ್ಲಿ ಬೈಲ್ಸ್ 15.066 ಪಾಯಿಂಟ್ಸ್ ಗಳಿಸಿದರು. ಹೋದ ವರ್ಷ ಚಾಂಪಿಯನ್‌ ಆಗಿದ್ದ ಚೀನಾದ ಲಿಯು ಟಿಂಗ್‌ಟಿಂಗ್‌ (14.433 ಪಾಯಿಂಟ್ಸ್) ಬೆಳ್ಳಿ ಜಯಿಸಿದರು. ಚೀನಾದವರೇ ಆದ ಲಿ ಶಿಜಿಯಾ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಬೈಲ್ಸ್ ಅವರು 24ನೇ ಪದಕ ಗೆದ್ದಾಗ ಬೆಲಾರಸ್‌ನ ವಿಟಾಲಿ ಸೆರ್ಬೊ (ಒಟ್ಟು 23 ಪದಕಗಳು) ಸ್ಥಾಪಿಸಿದ್ದ ದಾಖಲೆ ಮುರಿದಿದ್ದರು. 

ಪ್ರತಿಕ್ರಿಯಿಸಿ (+)