ಫೈನಲ್‌ಗೆ ಸಿಮೊನಾ ಹಲೆಪ್‌

7
ಮಾಂಟ್ರಿಯಲ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್

ಫೈನಲ್‌ಗೆ ಸಿಮೊನಾ ಹಲೆಪ್‌

Published:
Updated:

ಮಾಂಟ್ರಿಯಲ್‌: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರುಮೇನಿಯಾದ ಸಿಮೊನಾ ಹಲೆಪ್‌ ಅವರು ಇಲ್ಲಿ ನಡೆಯುತ್ತಿರುವ ಮಾಂಟ್ರಿಯಲ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. 

ಶನಿವಾರ ತಡರಾತ್ರಿ ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಸಿಮೊನಾ, 6–4, 6–1ರಿಂದ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರನ್ನು ಮಣಿಸಿದರು. 

ಮೊದಲ ಸೆಟ್‌ನಲ್ಲಿ ಸಿಮೋನಾ ಸ್ವಲ್ಪ ಪ್ರತಿರೋಧ ಎದುರಿಸಿದರು. ಆದರೆ, ಎರಡನೇ ಸೆಟ್‌ನಲ್ಲಿ ಅವರ ಆಟವು ಮತ್ತಷ್ಟು ರಂಗೇರಿತು. ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸಿದ ಹಲೆಪ್‌ ಸುಲಭವಾಗಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. 

ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ಅವರು ಈ ಟೂರ್ನಿಯ ಅಂತಿಮ ಘಟ್ಟ ತಲುಪಿ ದ್ದಾರೆ. 2016ರಲ್ಲಿ ಅವರು ಈ ಟೂರ್ನಿಯ ಚಾಂಪಿಯನ್‌ ಆಗಿದ್ದರು.

ಮೂರನೇ ಶ್ರೇಯಾಂಕಿತ ಆಟ ಗಾರ್ತಿ ಸ್ಲೋನ್‌ ಸ್ಟೆಫನ್ಸ್‌ ಹಾಗೂ ಐದನೇ ಶ್ರೇಯಾಂಕಿತ ಆಟಗಾರ್ತಿ ಎಲಿನಾ ಸ್ವಿಟೊಲಿನಾ ಅವರ ನಡುವಿನ ಇನ್ನೊಂದು ಸೆಮಿಫೈನಲ್‌ ಪಂದ್ಯದ ವಿಜೇತರೊಂದಿಗೆ ಹಲೆಪ್‌ ಸೆಣಸಲಿದ್ದಾರೆ. ಪಂದ್ಯದ ನಂತರ ಮಾತನಾಡಿದ ಸಿಮೊನಾ, ‘ಇಂದಿನ ಆಟ ತೃಪ್ತಿ ನೀಡಿದೆ. ಉತ್ತಮ ಸರ್ವ್‌ ಹಾಗೂ ದೀರ್ಘ ರ‍್ಯಾಲಿಗಳಿಂದ ಎದುರಾಳಿಯನ್ನು ಕಟ್ಟಿಹಾಕಿದೆ’ ಎಂದರು. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !