ಕಬಡ್ಡಿ: ದಾವಣಗೆರೆ, ಬಳ್ಳಾರಿಗೆ ಪ್ರಶಸ್ತಿ

ಮಂಗಳವಾರ, ಮಾರ್ಚ್ 26, 2019
26 °C

ಕಬಡ್ಡಿ: ದಾವಣಗೆರೆ, ಬಳ್ಳಾರಿಗೆ ಪ್ರಶಸ್ತಿ

Published:
Updated:
Prajavani

ಹೊಸಮಲಪನಗುಡಿ (ಹಂಪಿ): ಹಂಪಿ ಉತ್ಸವದ ಪ್ರಯುಕ್ತ ಇಲ್ಲಿ ಶನಿವಾರ ನಡೆದ ಕಬಡ್ಡಿ ಟೂರ್ನಿಯಲ್ಲಿ ದಾವಣಗೆರೆ ಮತ್ತು ಬಳ್ಳಾರಿ ತಂಡಗಳು ಪ್ರಶಸ್ತಿ ಜಯಿಸಿದವು.

ಪುರುಷರ ವಿಭಾಗದ ಫೈನಲ್‌ನಲ್ಲಿ ದಾವಣಗೆರೆ ತಂಡ 21–7 ಅಂಕಗಳಿಂದ ಮರ್ಲಾನಹಳ್ಳಿ ತಂಡದ ಎದುರು ಜಯ ಗಳಿಸಿ ₹ 20 ಸಾವಿರ ಬಹುಮಾನ ಪಡೆಯಿತು. 

ಮಹಿಳಾ ವಿಭಾಗದಲ್ಲಿ ಬಳ್ಳಾರಿ ತಂಡ 36–29ರಲ್ಲಿ ಕಂಪ್ಲಿ ಎದುರು ಜಯ ಸಾಧಿಸಿ ₹ 15 ಸಾವಿರ ಬಹುಮಾನ ತಮ್ಮದಾಗಿಸಿಕೊಂಡಿತು.

ದಾವಣಗೆರೆ ತಂಡದ ನವೀನ್ ಮೊದಲ ರೈಡಿಂಗ್‌ನಲ್ಲೇ ಮೂರು ಅಂಕಗಳನ್ನು ಗಳಿಸಿ ಉತ್ತಮ ಆರಂಭಕ್ಕೆ ಕಾರಣರಾದರು.

ನಂತರವೂ ವೇಗವಾಗಿ ಅಂಕಗಳ ಸಂಖ್ಯೆ ಹೆಚ್ಚಿಸಿದರು. ಎರಡು ಬಾರಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ ಲೋನಾ ಅಂಕಗಳನ್ನು ತಂದುಕೊಟ್ಟರು. ತಂಡದ ನಾಯಕ ಮನೋಹರ ತಾಳ್ಮೆಯ ಆಟವಾಡಿ ಸಹ ಆಟಗಾರರನ್ನು ಹುರಿದುಂಬಿಸಿದರು. ಪುರುಷರ ವಿಭಾಗದಲ್ಲಿ 23 ಮತ್ತು ಮಹಿಳಾ ವಿಭಾಗದಲ್ಲಿ ಮೂರು ತಂಡಗಳು ಪಾಲ್ಗೊಂಡಿದ್ದವು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !