ಬೆಂಗಳೂರು: ಕಠಿಣ ಪರಿಶ್ರಮವೇ ಯಶಸ್ಸಿಗೆ ದಾರಿ. ಕ್ರೀಡಾಪಟು ಆಗುವ ಕನಸು ನಿಮ್ಮದಾಗಿದ್ದರೆ ನಿಮ್ಮ ಗುರಿ ಒಲಿಂಪಿಕ್ಸ್ ಚಿನ್ನ ಗೆಲ್ಲುವುದಾಗಬೇಕು ಎಂದು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೊ ಅಥ್ಲೀಟ್ ನೀರಜ್ ಚೋಪ್ರಾ ಹೇಳಿದರು.
ಇಲ್ಲಿಯ ಯಲಹಂಕದಲ್ಲಿರುವ ವಿಶ್ವ ವಿದ್ಯಾಪೀಠ ಶಾಲೆಯ ಕ್ರೀಡಾ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡಿದ್ದ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
‘ನಾನು ಚಿನ್ನದ ಪದಕ ಗೆದ್ದಿದ್ದಕ್ಕೆ ನಮ್ಮ ರಾಷ್ಟ್ರಗೀತೆಯು ಒಲಿಂಪಿಕ್ ಅಂಗಣದಲ್ಲಿ ಮೊಳಗುವಂತಾಯಿತು. ವೈಫಲ್ಯಗಳಿಗೆ ಕುಗ್ಗದೆ ಮುನ್ನುಗ್ಗಬೇಕು‘ ಎಂದು ನೀರಜ್ ನುಡಿದರು.ತಮ್ಮ ಸಾಧನೆಯ ಹಿಂದಿನ ಶ್ರಮದ ಕುರಿತು ಮಕ್ಕಳೊಂದಿಗೆ ಹಂಚಿ ಕೊಂಡರು.
ಕಾರ್ಯಕ್ರಮದ ಬಳಿಕ ಚೋಪ್ರಾ ಅವರು ಬಳ್ಳಾರಿಯ ಇನ್‌ಸ್ಪೈರ್ ಇನ್‌ಸ್ಟಿ ಟ್ಯೂಟ್ ಆಫ್ ಸ್ಪೋರ್ಟ್‌ಗೆ ತೆರಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.