ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಕೃಷ್ಣಗೆ ಕಾರ್ಲ್‌ಸನ್‌‌ ಎದುರಾಳಿ

ಸೇಂಟ್ ಲೂಯಿಸ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಆನ್‌ಲೈನ್‌ ಚೆಸ್‌ ಟೂರ್ನಿ ಇಂದಿನಿಂದ
Last Updated 14 ಸೆಪ್ಟೆಂಬರ್ 2020, 13:46 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪಿ.ಹರಿಕೃಷ್ಣ ಅವರು ಸೇಂಟ್‌ ಲೂಯಿಸ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌‌ ಹಾಗೂ ಹಿಕ್ರಾವು ನಕಮುರ ಅವರಿಗೆ ಮುಖಾಮುಖಿಯಾಗಲಿದ್ದಾರೆ. ಟೂರ್ನಿಯು ಮಂಗಳವಾರ ಆರಂಭವಾಗಲಿದೆ.

ದೇಶದ ಎರಡನೇ ರ‍್ಯಾಂಕಿನ ಆಟಗಾರನಾಗಿರುವ ಹರಿಕೃಷ್ಣ, ಕಳೆದ ತಿಂಗಳು ನಡೆದ ಆನ್‌ಲೈನ್‌ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಇದ್ದರು.

ಐದು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 10 ಆಟಗಾರರು 9 ರ‍್ಯಾಪಿಡ್‌ ಹಾಗೂ 18 ಬ್ಲಿಟ್ಜ್‌ ಪಂದ್ಯಗಳಲ್ಲಿ ಆಡಲಿದ್ದಾರೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತ ಸುಮಾರು ₹ 1.83 ಕೋಟಿ.

ಹರಿಕೃಷ್ಣ ಅವರು ಟೂರ್ನಿಯಲ್ಲಿ ಎರಡನೇ ಅತಿ ಕಡಿಮೆ ಇಎಲ್‌ಒ ರೇಟಿಂಗ್‌ (2714) ಹೊಂದಿರುವ ಪಟುವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಲೇ ಕಾಣದ ನಾರ್ವೆಯ ಕಾರ್ಲ್‌ಸನ್‌‌ ಹಾಗೂ ಹೆಚ್ಚಿನ ರೇಟಿಂಗ್ಸ್‌ ಹೊಂದಿರುವ ಅಮೆರಿಕದ ನಕಮುರ ಅವರನ್ನು ಎದುರಿಸಲಿದ್ದಾರೆ.

ಅಮೆರಿಕದ ವೆಸ್ಲೆ ಸೊ, ರಷ್ಯಾದ ಇಯಾನ್‌ ನೆಪೊಮ್ನಿಯಾಟ್ಜಿ, ಅಲೆಕ್ಸಾಂಡರ್‌ ಗ್ರಿಶ್ಚುಕ್‌, ಅರ್ಮೆನಿಯಾದ ಅನುಭವಿ ಆಟಗಾರ ಲೆವೊನ್‌ ಅರೋನಿಯನ್‌, ಇರಾನ್‌ನ ಯುವ ಪ್ರತಿಭೆ ಅಲಿರೆಜಾ ಫಿರೌಜಾ ಹಾಗೂ ಅಮೆರಿಕದ ಲೇನಿಯರ್‌ ಡೊಮಿಂಗ್ವೆಜ್‌ ಕಣದಲ್ಲಿದ್ದಾರೆ. ಅಮೆರಿಕದ ಜೆಫರಿ ಕ್ಸಿಯಾಂಗ್‌ (2709) ಟೂರ್ನಿಯಲ್ಲಿ ಅತಿ ಕಡಿಮೆ ಇಎಲ್‌ಒ ರೇಟಿಂಗ್‌ ಹೊಂದಿರುವ ಆಟಗಾರ.

ಕಾರ್ಲ್‌ಸನ್‌ ಅವರು ಇತ್ತೀಚೆಗೆ ನಡೆದ ಮ್ಯಾಗ್ನಸ್‌ ಕಾರ್ಲಸನ್‌ ಚೆಸ್‌ ಟೂರ್‌ ಫೈನಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದು, ಇಲ್ಲಿಯೂ ಅವರೇ ಚಾಂಪಿಯನ್‌ ಆಗುವ ನೆಚ್ಚಿನ ಆಟಗಾರ. ನಕುಮರ, ನೆಪೊಮ್ನಿಯಾಟ್ಜಿ ಅಲ್ಲದೆ ಸೊ ಹಾಗೂ ಗ್ರಿಶ್ಚುಕ್‌ ಅವರುಕಾರ್ಲ್‌ಸನ್‌ ಅವರಿಗೆ ತೀವ್ರ ಪೈಪೋಟಿ ಒಡ್ಡುವ ನಿರೀಕ್ಷೆಯಿದೆ.

‘ಟೂರ್ನಿಯಲ್ಲಿ ಘಟಾನುಘಟಿ ಆಟಗಾರರು ಇದ್ದಾರೆ. ಆದರೆ ಅವರನ್ನು ಎದುರಿಸಲು ಸಜ್ಜಾಗಿದ್ದೇನೆ‘ ಎಂದು ಹರಿಕೃಷ್ಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT