ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIH ವಾರ್ಷಿಕ ಪ್ರಶಸ್ತಿ: ಹರ್ಮನ್‌ಪ್ರೀತ್‌, ಗುರ್ಜಿತ್‌, ಶ್ರೀಜೇಶ್ ನಾಮನಿರ್ದೇಶನ

Last Updated 23 ಆಗಸ್ಟ್ 2021, 13:29 IST
ಅಕ್ಷರ ಗಾತ್ರ

ಲಾಸನ್‌ (ಪಿಟಿಐ): ಭಾರತ ಪುರುಷರ ಹಾಕಿ ತಂಡದ ಡ್ರ್ಯಾಗ್‌ಫ್ಲಿಕರ್‌ ಹರ್ಮನ್‌ಪ್ರೀತ್ ಸಿಂಗ್‌, ಮಹಿಳಾ ತಂಡದ ಗುರ್ಜಿತ್ ಕೌರ್ ಅವರನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್ಐಎಚ್‌) ವಾರ್ಷಿಕ ಆಟಗಾರ ಮತ್ತು ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಅನುಭವಿ ಪಿ.ಆರ್‌.ಶ್ರೀಜೇಶ್ ಹಾಗೂ ಸವಿತಾ ಪೂನಿಯಾ ಅವರನ್ನು ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗಗಳ ವರ್ಷದ ಗೋಲ್‌ಕೀಪರ್ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಪುರುಷ ಮತ್ತು ಮಹಿಳಾ ತಂಡಗಳ ಕೋಚ್‌ಗಳಾದ ಗ್ರಹಾಂ ರೀಡ್ ಮತ್ತು ಶೋರ್ಡ್‌ ಮರೈನ್ ಅವರನ್ನು ತರಬೇತುದಾರರ ವಿಭಾಗಕ್ಕೆ ನಾಮನಿರ್ದೇಶನ ಮಾಡಲಾಗಿದೆ.

ಇತ್ತೀಚೆಗೆ ಕೊನೆಗೊಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಎರಡೂ ತಂಡಗಳು ಉತ್ತಮ ಸಾಮರ್ಥ್ಯ ತೋರಿದ್ದವು. ಪುರುಷರ ತಂಡವು 41 ವರ್ಷಗಳ ಬಳಿಕ ಪದಕದ (ಕಂಚು) ಸಾಧನೆ ಮಾಡಿತ್ತು. ಹರ್ಮನ್‌ಪ್ರೀತ್ ಅವರು ಎಂಟು ಪಂದ್ಯಗಳಲ್ಲಿ ಆರು ಗೋಲು ದಾಖಲಿಸಿದ್ದರು.

ಒಲಿಂಪಿಕ್ಸ್ ಇತಿಹಾಸದಲ್ಲಿ ಮಹಿಳಾ ತಂಡವು ಮೊದಲ ಬಾರಿ ಸೆಮಿಫೈನಲ್ ತಲುಪಿತ್ತು. ಗುರ್ಜಿತ್ ಕೌರ್‌ ಈ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಗೋಲು ಗಳಿಸಿ ಆಸ್ಟ್ರೇಲಿಯಾ ತಂಡವನ್ನು ಮಣಿಸುವಲ್ಲಿ ಅವರು ನೆರವಾಗಿದ್ದರು.

ಮಹಿಳಾ ತಂಡದ ಶರ್ಮಿಳಾ ದೇವಿ ಅವರನ್ನು ಉದಯೋನ್ಮುಖ ತಾರೆ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಆಟಗಾರರು, ಕೋಚ್‌ಗಳು, ಪತ್ರಕರ್ತರು ಹಾಗೂ ಅಭಿಮಾನಿಗಳು ಮತದಾನ ಮಾಡಿ (ಆಗಸ್ಟ್ 23ರಿಂದ ಸೆಪ್ಟೆಂಬರ್‌ 15ರವರೆಗೆ) ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ ಎಂದು ಎಫ್‌ಐಎಚ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT