ಈಜು: ಹರ್ಷಾ, ನೀನಾ ಪ್ರಥಮ

7

ಈಜು: ಹರ್ಷಾ, ನೀನಾ ಪ್ರಥಮ

Published:
Updated:

ಬೆಂಗಳೂರು: ಬೆಂಗಳೂರಿನ ಹರ್ಷ ಆರ್‌ ಮತ್ತು ನೀನಾ ವೆಂಕಟೇಶ್‌ ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆಯುತ್ತಿರುವ ರಾಜ್ಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮರಾದರು.

ರಾಜ್ಯ ಈಜು ಸಂಸ್ಥೆಯು ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ 50 ಮೀಟರ್ಸ್ ಬಟರ್‌ಫ್ಲೈ ಮತ್ತು 25 ಮೀಟರ್ಸ್ ಫ್ರೀಸ್ಟೈಲ್‌ ವಿಭಾಗದಲ್ಲಿ ಇವರು ಸಾಧನೆ ಮಾಡಿದರು.

ಫಲಿತಾಂಶಗಳು: ಬಾಲಕರ ವಿಭಾಗ, 50 ಮೀಟರ್ಸ್ ಬಟರ್‌ಫ್ಲೈ: ಹರ್ಷ ಆರ್‌ (ಬೆಂಗಳೂರು ಈಜು ಕೇಂದ್ರ)–1. ಕಾಲ: 27.82 ಸೆಕೆಂಡು, ಸಮರ್ಥ್ ಸುಬ್ರಹ್ಮಣ್ಯ (ಬೆಂಗಳೂರು ಈಜು ಕೇಂದ್ರ)–2, ಸಾಯಿ ಸಮರ್ಥ್‌ (ಗ್ಲೋಬಲ್ ಈಜು ಕೇಂದ್ರ)–3; ಬಾಲಕಿಯರ ವಿಭಾಗ, 25 ಮೀಟರ್ಸ್ ಫ್ರೀಸ್ಟೈಲ್‌: ನೀನಾ ವೆಂಕಟೇಶ್‌ (ಡಾಲ್ಫಿನ್ ಅಕ್ವಾಟಿಕ್ಸ್‌)–1. ಕಾಲ: 13.11 ಸೆಕೆಂಡು, ರಚನಾ ಎಸ್.ರಾವ್‌ (ಮಂಗಳಾ ಈಜು ಕ್ಲಬ್‌)–2, ಇಂಚರಾ (ವಿಜಯನಗರ ಅಕ್ವಾಟಿಕ್ಸ್)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !