ಗುರುವಾರ , ಜುಲೈ 29, 2021
27 °C

ಒಲಿಂಪಿಕ್ಸ್‌: ಚಿನ್ನ ಗೆದ್ದರೆ ₹ 6 ಕೋಟಿ – ಹರಿಯಾಣ ಸರ್ಕಾರ ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಚಂಡೀಗಡ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ತನ್ನ ರಾಜ್ಯದ ಅಥ್ಲೀಟ್‌ಗಳಿಗೆ ₹ 6 ಕೋಟಿ ಬಹುಮಾನ ನೀಡುವುದಾಗಿ ಹರಿಯಾಣ ಸರ್ಕಾರ ಬುಧವಾರ ಪ್ರಕಟಿಸಿದೆ.

ಬೆಳ್ಳಿ ಪದಕ ವಿಜೇತರಿಗೆ ₹ 4 ಕೋಟಿ ಮತ್ತು ಕಂಚು ಗೆದ್ದವರಿಗೆ ₹ 2.50 ಕೋಟಿ ನೀಡುವುದಾಗಿಯೂ ಸರ್ಕಾರ ಘೋಷಿಸಿದೆ.

ಅಂತರರಾಷ್ಟ್ರೀಯ ಒಲಿಂಪಿಕ್ ದಿನದ ಪ್ರಯುಕ್ತ ಒಲಿಂಪಿಕ್ ಪದಕ ವಿಜೇತರೊಂದಿಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಸಂವಾದ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಕ್ರೀಡಾ ಸಚಿವ ಸಂದೀಪ್ ಸಿಂಗ್ ಈ ವಿಷಯವನ್ನು ಪ್ರಕಟಿಸಿದರು.

‘ರಾಜ್ಯದ 30 ಅಥ್ಲೀಟ್‌ಗಳು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಅವರ ಸಿದ್ಧತೆಗೆ ತಲಾ ₹ 5 ಲಕ್ಷ ನೆರವು ನೀಡಲಾಗಿದೆ ಎಂದು ಸಂದೀಪ್ ಇದೇ ವೇಳೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು