ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಸ್ಟೀಲರ್ಸ್‌ ಶುಭಾರಂಭ

Last Updated 12 ಅಕ್ಟೋಬರ್ 2018, 16:25 IST
ಅಕ್ಷರ ಗಾತ್ರ

ಸೋನೆಪತ್‌: ಮೋನು ಗೋಯತ್‌, ಕುಲದೀಪ್ ಸಿಂಗ್ ಮತ್ತು ನವೀನ್ ಅವರ ಅಮೋಘ ಆಟದ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ಗೆಲುವಿನೊಂದಿಗೆ ಪ್ರೊ ಕಬಡ್ಡಿ ಲೀಗ್‌ನ ತವರಿನ ಅಭಿಯಾನವನ್ನು ಆರಂಭಿಸಿತು.

ಇಲ್ಲಿನ ಮೋತಿಲಾಲ್ ನೆಹರೂ ಕ್ರೀಡಾಶಾಲೆಯ ಅಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯರು ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು 32–25ರಿಂದ ಮಣಿಸಿದರು.

ಮೋನು ಗೋಯತ್‌ ಮತ್ತು ಕುಲದೀಪ್ ಸಿಂಗ್ ತಲಾ ಏಳು ಪಾಯಿಂಟ್ ಗಳಿಸಿದರೆ ನವೀನ್ ಆರು ಪಾಯಿಂಟ್ ಕಲೆ ಹಾಕಿದರು. ಮೂರು ಪಾಯಿಂಟ್ ಗಳಿಸಿದ ಸುನಿಲ್ ಕೂಡ ತಂಡದ ಗೆಲುವಿಗೆ ನೆರವಾದರು.

ಫಾರ್ಚೂನ್‌ಜೈಂಟ್ಸ್ ಪರವಾಗಿ ಪ್ರಪಂಚನ್‌ (9 ಪಾಯಿಂಟ್ಸ್‌), ಸಚಿನ್‌ (8 ಪಾಯಿಂಟ್ಸ್‌) ಮತ್ತು ಸುನಿಲ್ ಕುಮಾರ್‌ (5 ಪಾಯಿಂಟ್ಸ್‌) ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿದರು. ಆದರೆ ತಂಡವನ್ನು ಸೋಲಿನಿಂದ ಪಾರು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT