ಶುಕ್ರವಾರ, ಆಗಸ್ಟ್ 7, 2020
28 °C

ಕ್ರೀಡಾ ಸಂಹಿತೆ ಅನುಸರಿಸದ ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆ ಬೇಡ: ಹೈಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರೀಡಾ ಸಂಹಿತೆಯನ್ನು ಅನುಸರಿಸದ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ (ಎನ್‌ಎಸ್‌ಎಫ್) ತಾತ್ಕಾಲಿಕ ಮಾನ್ಯತೆ ನೀಡುವುದನ್ನು ನಿಲ್ಲಿಸಬೇಕು ಎಂದು ದೆಹಲಿ ಹೈಕೋರ್ಟ್‌ ಸೂಚಿಸಿದೆ.

’ಕ್ರೀಡಾ ಸಂಹಿತೆಯನ್ನು ಪಾಲಿಸದ ಎನ್‌ಎಸ್‌ಎಫ್‌ಗಳಿಗೆ ತಾತ್ಕಾಲಿಕ ಮಾನ್ಯತೆ ನೀಡಲು ನಾವು ಬಿಡುವುದಿಲ್ಲ. ತಮ್ಮ ಕಾರ್ಯವೈಖರಿಯನ್ನು ಸಂಹಿತೆಯ ಚೌಕಟ್ಟಿನೊಳಗೆ ನಡೆಸುವಂತೆ ಫೆಡರೇಷನ್‌ಗಳಿಗೆ ತಾಕೀತು ಮಾಡಿ‘ ಎಂದು ನ್ಯಾಯಪೀಠದ ನ್ಯಾಯಾಧೀಶರಾದ ಹಿಮಾ ಕೊಹ್ಲಿ ಮತ್ತು ನಾಜ್ಮಿ ವಜೀರಿ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಸೂಚನೆ ನೀಡಿದರು.

ಮುಂದಿನ ವರ್ಷ ನಡೆಯುವ ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡುವ ದೃಷ್ಟಿಯಿಂದ 57 ಕ್ರೀಡಾ ಫೆಡರೇಷನ್‌ಗಳಿಗೆ ತಾತ್ಕಾಲಿಕ ಮಾನ್ಯತೆ ನೀಡುವಂತೆ ಸಚಿವಾಲಯವು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು