ಕಬಡ್ಡಿ: ಆಯ್ಕೆ ಟ್ರಯಲ್ಸ್‌ನಲ್ಲಿ ಗೊಂದಲ

7

ಕಬಡ್ಡಿ: ಆಯ್ಕೆ ಟ್ರಯಲ್ಸ್‌ನಲ್ಲಿ ಗೊಂದಲ

Published:
Updated:

ನವದೆಹಲಿ: ಭಾರತ ಅಮೆಚೂರ್ ಕಬಡ್ಡಿ ಫೆಡರೇಷನ್ ಶನಿವಾರ ಆಯೋಜಿಸಿದ್ದ ಆಯ್ಕೆ ಟ್ರಯಲ್ಸ್‌ ಗೊಂದಲದಲ್ಲಿ ಮುಕ್ತಾಯಗೊಂಡಿದೆ. ಭಾರತ ಪುರುಷರ ಮತ್ತು ಮಹಿಳೆಯರ ತಂಡಗಳ ಅಯ್ಕೆಗಾಗಿ ಟ್ರಯಲ್ಸ್ ಆಯೋಜಿಸಲಾಗಿತ್ತು.

ಆದರೆ ರಾಷ್ಟ್ರೀಯ ತಂಡದ ಆಟಗಾರರು ಹಾಜರಾಗಲಿಲ್ಲ. ಇತ್ತೀಚೆಗೆ ಹೊಸದಾಗಿ ಆರಂಭಗೊಂಡ ನ್ಯೂ ಕಬಡ್ಡಿ ಫೆಡರೇಷನ್ ಆಫ್‌ ಇಂಡಿಯಾದ (ಎನ್‌ಕೆಎಫ್‌ಐ) ಆಟಗಾರರು ಹಾಜರಾಗಿ ಅಚ್ಚರಿ ಮೂಡಿಸಿದರು.

ಏಷ್ಯನ್ ಕ್ರೀಡಾಕೂಟಕ್ಕೆ ನಡೆದ ಆಯ್ಕೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ದೂರಿ ಎನ್‌ಕೆಎಫ್‌ಐ ನ್ಯಾಯಾಲಯದ ಮೆಟ್ಟಿಲೇರಿತ್ತು. ಕ್ರೀಡಾಕೂಟ ಮುಗಿದ ನಂತರ ಆಟಗಾರರ ಸಾಮರ್ಥ್ಯ ಅಳೆಯುವುದಕ್ಕಾಗಿ ಟ್ರಯಲ್ಸ್ ಆಯೋಜಿಸುವಂತೆ ದೆಹಲಿ ಹೈಕೋರ್ಟ್‌ ಸೂಚಿಸಿತ್ತು.

ಈ ನಡುವೆ ಎನ್‌ಕೆಎಫ್‌ಐ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಆಯ್ಕೆ ಟ್ರಯಲ್ಸ್ ಆಯೋಜಿಸಿತ್ತು. ಅದರಲ್ಲಿ ಆಯ್ಕೆಯಾದ ಪುರುಷ ಮತ್ತು ಮಹಿಳಾ ತಂಡಗಳು ಶನಿವಾರ ರಾಷ್ಟ್ರೀಯ ತಂಡದ ಎದುರು ಆಡಲು ಇಲ್ಲಿಗೆ ಬಂದಿದ್ದವು. ರಾಷ್ಟ್ರೀಯ ತಂಡವು ಪಾಲ್ಗೊಳ್ಳಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ಸೂಚಿಸಿರಲಿಲ್ಲ. ಆದ್ದರಿಂದ ತಂಡಗಳು ಬರಲಿಲ್ಲ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎನ್‌ಕೆಎಫ್‌ಐ ವಕೀಲ ಭರತ್‌ ನಾಗರ್‌ ‘ನಮ್ಮ ತಂಡ ಟ್ರಯಲ್ಸ್‌ಗೆ ಬಂದಿದ್ದರೂ ಎದುರಾಳಿ ತಂಡದವರು ಬರಲಿಲ್ಲ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು’ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !