ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಹಿಳೆಯರಿಗೆ ಪ್ರಶಸ್ತಿ ಸುತ್ತಿನ ಕನಸು

ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಪಾರುಪತ್ಯ ಮೆರೆದ ಏಷ್ಯಾದ ಬಾಕ್ಸರ್‌ಗಳು
Last Updated 21 ನವೆಂಬರ್ 2018, 18:55 IST
ಅಕ್ಷರ ಗಾತ್ರ

ನವದೆಹಲಿ: ಏಷ್ಯಾ ಕ್ರೀಡಾಕೂಟದಲ್ಲಿ ಅನುಭವಿಸಿದ ನಿರಾಸೆಯಿಂದ ಹೊರಬಂದಿರುವ ಭಾರತದ ಮಹಿಳಾ ಬಾಕ್ಸರ್‌ಗಳು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಹಂತ ತಲುಪುವ ಕನಸು ಹೊತ್ತು ಗುರುವಾರ ಕಣಕ್ಕೆ ಇಳಿಯುವರು.

48 ಕೆ.ಜಿ ವಿಭಾಗದಲ್ಲಿ ಎಂ.ಸಿ.ಮೇರಿ ಕೋಮ್‌, 69 ಕೆ.ಜಿ ವಿಭಾಗದಲ್ಲಿ ಲಾವ್ಲಿನಾ ಬೋರ್ಗೊಹೇನ್‌, 57 ಕೆ.ಜಿ ವಿಭಾಗದಲ್ಲಿ ಸೋನಿಯಾ ಚಾಹಲ್‌ ಮತ್ತು 64 ಕೆ.ಜಿ ವಿಭಾಗದಲ್ಲಿ ಸಿಮ್ರನ್‌ಜೀತ್ ಕೌರ್ ಎದುರಾಳಿಯನ್ನು ಮಣಿಸಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು.

‘ಬಾಕ್ಸರ್‌ಗಳು ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಮೇರಿ ಕೋಮ್ ಚಿನ್ನ ಗೆಲ್ಲುವುದು ಖಚಿತವಾಗಿದ್ದು ಇತರ ಸ್ಪರ್ಧಾಳುಗಳು ಕೂಡ ಪದಕಗಳನ್ನು ಗಳಿಸಿಕೊಡುವ ಸಾಧ್ಯತೆ ಇದೆ. ಇದು ಸಂತಸದ ವಿಷಯ’ ಎಂದು ಭಾರತ ತಂಡದ ಹೈ ಪರ್ಫಾರ್ಮೆನ್ಸ್‌ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಹೇಳಿದರು.

10 ವಿಭಾಗಗಳಲ್ಲಿ ಸೆಮಿಫೈನಲ್ ತಲುಪಿರುವ 40 ಮಂದಿಯ ಪೈಕಿ ಐದು ಮಂದಿ ಚೀನಾದವರಾಗಿದ್ದು ಉತ್ತರ ಕೊರಿಯಾ, ಟರ್ಕಿ ಮತ್ತು ಅಮೆರಿಕದ ತಲಾ ಮೂವರು ಇದ್ದಾರೆ. ಜರ್ಮನಿ, ಜಪಾನ್‌, ಕಜಕಸ್ತಾನ, ನೆದರ್ಲೆಂಡ್ಸ್‌, ಚೀನಾ ತೈಪೆ ಮತ್ತ ಉಕ್ರೇನ್‌ನ ತಲಾ ಇಬ್ಬರು ನಾಲ್ಕರಘಟ್ಟದಲ್ಲಿ ಸೆಣಸಲಿದ್ದಾರೆ.

ಏಷ್ಯಾದ ಪಾರುಪತ್ಯ: ಏಷ್ಯಾದ ಬಾಕ್ಸರ್‌ಗಳು ಈ ಬಾರಿಯೂ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮೆರೆದರು. 2016ರಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಏಷ್ಯಾ 16 ಪದಕ ಗೆದ್ದಿದ್ದರೆ, ಈ ಬಾರಿ ಈಗಾಗಲೇ 21 ಪದಕಗಳನ್ನು ಕೊರಳಿಗೆ ಹಾಕಿಕೊಂಡಿದ್ದಾರೆ.

2006ರಲ್ಲಿ ತಾಯ್ನಾಡಿನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಭಾರತ ನಾಲ್ಕು ಚಿನ್ನದೊಂದಿಗೆ ಎಂಟು ಪದಕ ಗಳಿಸಿತ್ತು. ಅದು ದೇಶದ ಈ ವರೆಗಿನ ಗರಿಷ್ಠ ಸಾಧನೆಯಾಗಿತ್ತು. 2016ರ ನಂತರ ಭಾರತ ಒಂದು ಚಿನ್ನದ ಪದಕವನ್ನು ಕೂಡ ಗೆಲ್ಲಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT