ಅಧ್ಯಯನ, ಅಭ್ಯಾಸದ ಗೊಂದಲದಲ್ಲಿ ಹಿಮಾ ದಾಸ್‌

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅಧ್ಯಯನ, ಅಭ್ಯಾಸದ ಗೊಂದಲದಲ್ಲಿ ಹಿಮಾ ದಾಸ್‌

Published:
Updated:
Prajavani

ನವದೆಹಲಿ : ಅಥ್ಲೆಟಿಕ್ ಟ್ರ್ಯಾಕ್‌ನಲ್ಲಿ ಮಿಂಚಿನ ಓಟದ ಮೂಲಕ ಹೆಸರು ಮಾಡಿರುವ ಹಿಮಾ ದಾಸ್‌ ಈಗ ಗೊಂದಲದಲ್ಲಿದ್ದಾರೆ. ಕ್ರೀಡಾ ಸಾಧನೆಯ ಜೊತೆಯಲ್ಲಿ ಅಭ್ಯಾಸದ ಬಗ್ಗೆಯೂ ಕಾಳಜಿ ಇರುವ ಅವರು ಪರೀಕ್ಷೆ ಮತ್ತು ಓಟದ ಅಭ್ಯಾಸದ ನಡುವೆ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತಿಲ್ಲ.

ಅಸ್ಸಾಂನ ನಾಗಾಂವ್‌ ಜಿಲ್ಲೆಯ ಕಂದುಲಿಮರಿ ಗ್ರಾಮದ ಹಿಮಾ ದಾಸ್‌ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ 400 ಮೀಟರ್ಸ್‌ ಓಟದಲ್ಲಿ ಚಿನ್ನ ಗೆದ್ದ ನಂತರ ಬೆಳಕಿಗೆ ಬಂದ ಕ್ರೀಡಾ ಪ್ರಪಂಚದ ಗಮನ ಸೆಳೆದಿದ್ದರು. 2016ರಿಂದ ಪಾಲ್ಗೊಂಡ ಎಲ್ಲ ಕೂಟಗಳಲ್ಲೂ ಗಮನಾರ್ಹ ಸಾಧನೆ ಮಾಡಿದರು. ಕಳೆದ ವರ್ಷ ನಡೆದಿದ್ದ ಏಷ್ಯಾ ಕ್ರೀಡಾಕೂಟದಲ್ಲಿ 400 ಮೀಟರ್ಸ್ ಓಟದಲ್ಲಿ 50.79 ಸೆಕೆಂಡುಗಳ  ಸಾಧನೆ ಮಾಡಿದ್ದರು.

ಬದುಕಿಗೆ ಶಿಕ್ಷಣವೂ ಅಗತ್ಯ ಎಂದು ಅಭಿಪ್ರಾಯಪಡುವ ಅವರು ಅಸ್ಸಾಂ ಹೈಯರ್ ಸೆಕೆಂಡರಿ ಎಜುಕೇಷನ್ ಕೌನ್ಸಿಲ್‌ ಅಡಿಯಲ್ಲಿ 12ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ವರ್ಷದಲ್ಲಿ ಪ್ರಮುಖ ಕೂಟಗಳಲ್ಲಿ ಸಾಧನೆ ಮಾಡುವುದರ ಕಡೆಗೂ ನೋಟ ಹರಿಸಿದ್ದಾರೆ.

ಪರೀಕ್ಷೆಗಳು ಈ ತಿಂಗಳ 12ರಂದು ಆರಂಭಗೊಂಡಿದ್ದು ಮಾರ್ಚ್‌ ಮದ್ಯದ ವರೆಗೆ ನಡೆಯಲಿವೆ. ಹುಟ್ಟೂರಿನ ಧಿಂಗ್ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆ ಬರೆಯಲು 120 ಕಿಲೋಮೀಟರ್ ದೂರದಲ್ಲಿರುವ ಗುವಾಹಟಿಯ ಸಾಯಿ ಕೇಂದ್ರದಿಂದ ನಿತ್ಯವೂ ಬಂದು ಹೋಗುತ್ತಿದ್ದಾರೆ.

‘ತರಬೇತಿಯ ಜೊತೆಯಲ್ಲೇ ಓದುವುದಕ್ಕಾಗಿ ಸಮಯ ನಿಗದಿ ಮಾಡಿಕೊಂಡಿದ್ದೇನೆ. ಮೊದಲ ಪರೀಕ್ಷೆಗಾಗಿ ಹಿಂದಿನ ದಿನ ಸಂಜೆ ಬಂದಿದ್ದೆ. ಪರೀಕ್ಷೆ ಮುಗಿದ ನಂತರ ವಾಪಸಾಗಿದ್ದೆ. ಮುಂದಿನ ಪರೀಕ್ಷೆ ಶನಿವಾರ ಇದ್ದು ಶುಕ್ರವಾರ ಸಂಜೆಯೇ ಹೊರಡಬೇಕಾಗಿದೆ’ ಎಂದು ಅವರು ತಿಳಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !