ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಗೆ ಮತ್ತೊಂದು ಚಿನ್ನ

Last Updated 17 ಜುಲೈ 2019, 19:56 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಹಿಮಾ ದಾಸ್‌ ಮತ್ತೊಂದು ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಜೆಕ್‌ ಗಣರಾಜ್ಯದ ಟ್ಯಾಬರ್‌ ಅಥ್ಲೆಟಿಕ್ಸ್ ಕೂಟದ 200 ಮೀ. ಓಟದಲ್ಲಿ ಅವರು ಬುಧವಾರ ಅಗ್ರಸ್ಥಾನ ಪಡೆದರು.

ಜೆಕ್‌ ಗಣರಾಜ್ಯ ಪ್ರತಿನಿಧಿಸುವ ಅಥ್ಲೀಟ್‌ಗಳೇ ಹೆಚ್ಚಾಗಿ ಇದ್ದ ಸ್ಪರ್ಧೆಯಲ್ಲಿ ಹಿಮಾ ಹೆಚ್ಚು ಹೋರಾಟ ಎದುರಿಸಬೇಕಾಗಲಿಲ್ಲ. ಭಾರತದ ಇನ್ನೋರ್ವ ಅಥ್ಲೀಟ್‌ ವಿ.ಕೆ.ವಿಸ್ಮಯಾ 23.43 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಬಾಚಿಕೊಂಡರು. ಈ ವರ್ಷದ ಜುಲೈ 2ರಿಂದ ಇದುವರೆಗೆ ಹಿಮಾ ಗೆದ್ದ ನಾಲ್ಕನೇ ಚಿನ್ನದ ಪದಕ ಇದು.

ಇದೇ ಟೂರ್ನಿಯ ಪುರುಷರ 400 ಮೀಟರ್‌ ಓಟದಲ್ಲಿ ಮೊಹಮ್ಮದ್‌ ಅನಾಸ್‌ (45.40 ಸೆಕೆಂಡ್‌) ಚಿನ್ನದ ಪದಕ ಗೆದ್ದರು. ಭಾರತದ ಇತರ ಅಥ್ಲೀಟ್‌ಗಳಾದ ಟಾಮ್‌ ನೋಹ್‌ ನಿರ್ಮಲ್‌ ಅವರು ವರ್ಷದ ಶ್ರೇಷ್ಠ ಸಾಧನೆ ತೋರಿ (46.59) ಬೆಳ್ಳಿ ಪದಕ ಜಯಿಸಿದರೆ, ಕೆ.ಎಸ್‌.ಜೀವನ್‌ (46.60) ಕಂಚು ಗೆದ್ದರು.

ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು200 ಮೀಟರ್‌ ಸ್ಪರ್ಧೆಯನ್ನು 23.02 ಸೆಕೆಂಡ್‌ ಅವಧಿಯಲ್ಲಿ ಮುಗಿಸಬೇಕು. 400 ಮೀಟರ್‌ಗೆ ಅರ್ಹತಾ ಅವಧಿ 51.80 ಸೆಕೆಂಡ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT