ಬುಧವಾರ, ಸೆಪ್ಟೆಂಬರ್ 18, 2019
23 °C

ಹಿಮಾ ದಾಸ್‌ಗೆ ಆರನೇ ಚಿನ್ನ

Published:
Updated:
Prajavani

ನವದೆಹಲಿ: ಭಾರತದ ಹಿಮಾ ದಾಸ್‌ ಮತ್ತೊಂದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಜೆಕ್‌ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕಿ ಮಿಟಿಂಕ್‌ ರೇಟರ್‌ ಸ್ಪರ್ಧೆಯ 300 ಮೀಟರ್ಸ್‌ ಓಟದಲ್ಲಿ ಅವರಿಗೆ ಪದಕ ಒಲಿದಿದೆ. ಪುರುಷರ ಸ್ಪರ್ಧೆಯಲ್ಲಿ ಮಹ ಮ್ಮದ್‌ ಅನಾಸ್‌ ಕೂಡ ಚಿನ್ನಕ್ಕೆ ಮುತ್ತಿಟ್ಟರು.

ಜುಲೈ 2ರಿಂದ ಇಲ್ಲಿಯವರೆಗೆ ಯುರೋಪಿಯನ್‌ ಸ್ಪರ್ಧೆಗಳಲ್ಲಿ  ಹಿಮಾ ಗೆದ್ದ ಆರನೇ ಚಿನ್ನ ಇದು.

ಜುಲೈ 20ರಂದು ಜೆಕ್‌ ಗಣರಾಜ್ಯದಲ್ಲೇ ನಡೆದಿದ್ದ ನೊವ್‌ ಮೆಸ್ಟ್ರೊ ಕೂಟದಲ್ಲಿ ಅವರು ಐದನೇ ಚಿನ್ನಕ್ಕೆ ಕೊರಳೊಡ್ಡಿದ್ದರು.

Post Comments (+)