ಹಾಕಿ: ಕ್ರೀಡಾ ಶಾಲೆಗೆ ಜಯ

7

ಹಾಕಿ: ಕ್ರೀಡಾ ಶಾಲೆಗೆ ಜಯ

Published:
Updated:
Deccan Herald

ಬೆಂಗಳೂರು: ಹಾಸನದ ಕ್ರೀಡಾ ಶಾಲೆ ತಂಡದವರು ಬಿಎಚ್‌ಎಸ್‌ ಅಂತರ ಶಾಲಾ ಬಾಲಕಿಯರ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದ್ದಾರೆ.

ಗುರುವಾರ ನಡೆದ ಹೋರಾಟದಲ್ಲಿ ಕ್ರೀಡಾ ಶಾಲೆ 6–0 ಗೋಲುಗಳಿಂದ ಬಿಷಪ್‌ ಕಾಟನ್‌ ಬಾಲಕಿಯರ ಪ್ರೌಢಶಾಲೆ ಎದುರು ಗೆದ್ದಿತು.

ವಿಜಯೀ ತಂಡದ ಜೆ. ಚಂದನಾ (3 ಮತ್ತು 18ನೇ ನಿಮಿಷ) ಎರಡು ಗೋಲು ದಾಖಲಿಸಿ ಗಮನ ಸೆಳೆದರು.

ಸಿ.ಎಂ.ಶಾನಾ (6ನೇ ನಿಮಿಷ), ಕೆ.ವಿ.ಸ್ನೇಹಾ (20), ಸೌಮ್ಯಾ (23) ಮತ್ತು ಎಸ್‌.ಎಸ್‌.ನಿಶು (24) ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಕೋರಮಂಗಲದ ಚಿನ್ಮಯ ವಿದ್ಯಾಲಯ ‘ಬಿ’ ತಂಡ 1–0 ಗೋಲಿನಿಂದ ದಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಬೆಂಗಳೂರು ತಂಡದ ವಿರುದ್ಧ ವಿಜಯಿಯಾಯಿತು.

ಎಂ.ಶ್ರೇಯಾ 12ನೇ ನಿಮಿಷದಲ್ಲಿ ಗೋಲು ದಾಖಲಿಸಿ ಚಿನ್ಮಯ ತಂಡದ ಗೆಲುವಿನ ರೂವಾರಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !