ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

33 ಮಂದಿ ಆಟಗಾರರ ಆಯ್ಕೆ

ಜೂನಿಯರ್‌ ರಾಷ್ಟ್ರೀಯ ಹಾಕಿ ಶಿಬಿರ
Last Updated 10 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜೂನಿಯರ್‌ ಆಟಗಾರರ ರಾಷ್ಟ್ರೀಯ ಶಿಬಿರಕ್ಕೆ ಹಾಕಿ ಇಂಡಿಯಾ 33 ಸದಸ್ಯರನ್ನು ಶನಿವಾರ ಆಯ್ಕೆ ಮಾಡಿದೆ. ‘ಸುಲ್ತಾನ್ ಆಫ್‌ ಜೋಹರ್‌ ಕಪ್‌ ಟೂರ್ನಿ’ಗೆ ಸಿದ್ಧವಾಗುವ ಉದ್ದೇಶದಿಂದ ಆಗಸ್ಟ್‌ 12ರಿಂದ ಬೆಂಗಳೂರಿನಲ್ಲಿ ಶಿಬಿರ ನಡೆಯಲಿದೆ.

ಮೂವರು ಗೋಲುಕೀಪರ್‌ಗಳು, ತಲಾ 10 ಡಿಫೆಂಡರ್ಸ್, ಮಿಡ್‌ಫೀಲ್ಡರ್ಸ್ ಹಾಗೂ ಫಾರ್ವರ್ಡ್‌ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆಗಸ್ಟ್‌ 31ಕ್ಕೆ ಶಿಬಿರ ಮುಕ್ತಾಯವಾಗಲಿದೆ.

ಒಂಬತ್ತನೇ ‘ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಟೂರ್ನಿ’ ಅಕ್ಟೋಬರ್‌ನಲ್ಲಿ ನಡೆಯಲಿದೆ.

ತಂಡ ಇಂತಿದೆ: ಗೋಲುಕೀಪರ್ಸ್: ಪವನ್‌, ಪ್ರಶಾಂತ್‌ ಕುಮಾರ್‌ ಚೌಹಾನ್‌ ಹಾಗೂ ಸಾಹಿಲ್‌ಕುಮಾರ್‌ ನಾಯಕ್‌.

ಡಿಫೆಂಡರ್ಸ್: ಸುಮನ್‌ ಬೆಕ್‌, ಪ್ರತಾಪ್‌ ಲಾಕ್ರಾ, ಸಂಜಯ್‌, ಸುಂದರಂ ಸಿಂಗ್‌ ರಾಜಾವತ್‌, ಮನ್‌ದೀಪ್‌ ಮೋರ್‌, ಪರಮ್‌ಪ್ರೀತ್‌ ಸಿಂಗ್‌, ದೀನಚಂದ್ರ ಸಿಂಗ್‌ ಮೊಯಿರಂಗ್‌ದೆಮ್‌, ನಬಿನ್‌ ಕುಜುರ್‌, ಶರದಾನಂದ ತಿವಾರಿ ಹಾಗೂ ನೀರಜ್‌ಕುಮಾರ್‌ ವಾರಿಬಮ್‌.

ಮಿಡ್‌ಫೀಲ್ಡರ್ಸ್: ಸುಖಮನ್‌ ಸಿಂಗ್‌, ಗ್ರೆಗೋರ್‌ ಕ್ಸೆಸ್‌, ಅಂಕಿತ್‌ ಪಾಲ್‌, ಆಕಾಶದೀಪ್‌ ಸಿಂಗ್‌ ಜೂನಿಯರ್‌, ವಿಷ್ಣು ಕಾಂತ್‌ ಸಿಂಗ್‌, ಗೋಪಿಕುಮಾರ್‌ ಸೊಂಕರ್‌, ವಿಶಾಲ್‌ ಅಂಟಿಲ್‌, ಸೂರ್ಯ ಎನ್‌.ಎಂ., ಮಣಿಂದರ್‌ ಸಿಂಗ್‌ ಮತ್ತು ರವಿಚಂದ್ರ ಸಿಂಗ್‌ ಮೊಯಿರಂಗ್‌ದೆಮ್‌

ಫಾರ್ವಡ್ಸ್: ಸುದೀಪ್‌ ಚಿರ್ಮಾಕೊ, ರಾಹುಲ್‌ ಕುಮಾರ್‌ ರಾಜ್‌ಭರ್, ಉತ್ತಮ್‌ಸಿಂಗ್‌, ಎಸ್‌. ಕಾರ್ತಿ, ದಿಲ್‌ಪ್ರೀತ್‌ ಸಿಂಗ್‌, ಅರಾಜೀತ್‌ ಸಿಂಗ್‌ ಹುಂದಲ್‌, ಅಮನ್‌ದೀಪ್‌ ಸಿಂಗ್‌, ಪ್ರಭಜೋತ್‌ ಸಿಂಗ್‌, ಶಿವ ಆನಂದ್‌ ಮತ್ತು ಅರ್ಷದೀಪ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT