ಹಾಕಿ: ಬೆಲ್ಜಿಯಂ ಜಯಭೇರಿ

7

ಹಾಕಿ: ಬೆಲ್ಜಿಯಂ ಜಯಭೇರಿ

Published:
Updated:
Deccan Herald

ಭುವನೇಶ್ವರ: ನಾಲ್ಕು ಕ್ವಾರ್ಟರ್‌ಗಳಲ್ಲೂ ಗುಣಮಟ್ಟದ ಆಟ ಆಡಿದ ಬೆಲ್ಜಿಯಂ ತಂಡ ಹಾಕಿ ವಿಶ್ವಕಪ್‌ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಸಿ’ ಗುಂಪಿನ ಪೈಪೋಟಿಯಲ್ಲಿ ಬೆಲ್ಜಿಯಂ 5–1 ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಇದರೊಂದಿಗೆ ಕ್ವಾರ್ಟರ್‌ ಫೈನಲ್‌ ಹಾದಿಯನ್ನು ಸುಗಮ ಮಾಡಿಕೊಂಡಿತು.

ದಕ್ಷಿಣ ಆಫ್ರಿಕಾ ತಂಡ ಮೊದಲ ನಿಮಿಷದಲ್ಲೇ ಖಾತೆ ತೆರೆದು ಭರವಸೆ ಮೂಡಿಸಿತ್ತು. ನಿಕೋಲಸ್‌ ಸ್ಪೂನರ್‌ ಫೀಲ್ಡ್‌ ಗೋಲು ಹೊಡೆದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬೆಲ್ಜಿಯಂ ನಂತರ ಮೋಡಿ ಮಾಡಿತು. 14ನೇ ನಿಮಿಷದಲ್ಲಿ ಅಲೆಕ್ಸಾಂಡರ್‌ ಹೆನ್ರಿಕ್ಸ್‌ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿ 1–1 ಸಮಬಲಕ್ಕೆ ಕಾರಣರಾದರು. 18ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಸಿಮನ್‌ ಗೌಗ್‌ನಾರ್ಡ್‌ ಬೆಲ್ಜಿಯಂ ತಂಡಕ್ಕೆ 2–1 ಮುನ್ನಡೆ ತಂದುಕೊಟ್ಟರು. 22ನೇ ನಿಮಿಷದಲ್ಲಿ ಈ ತಂಡಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಲಭಿಸಿತು. ಈ ಅವಕಾಶವನ್ನು ಹೆನ್ರಿಕ್ಸ್‌ ಗೋಲಾಗಿ ಪರಿವರ್ತಿಸಿದರು. 30ನೇ ನಿಮಿಷದಲ್ಲಿ ಥಾಮಸ್‌ ಬ್ರೀಲ್ಸ್‌ ಪಡೆಗೆ ಮೂರನೇ ಪೆನಾಲ್ಟಿ ಕಾರ್ನರ್‌ ಸಿಕ್ಕಿತು. ಈ ಅವಕಾಶವನ್ನು ಸದು ಪಯೋಗಪಡಿಸಿಕೊಂಡ ಲೊಯಿಕ್‌ ಲುಯ್‌‍ಪಯೆರ್ಟ್‌ ತಂಡದ ಖಾತೆಗೆ ನಾಲ್ಕನೇ ಗೋಲು ಸೇರ್ಪಡೆ ಮಾಡಿದರು.

48ನೇ ನಿಮಿಷದಲ್ಲಿ ಸೆಡ್ರಿಕ್‌ ಚಾರ್ಲಿಯರ್‌ ಕೈಚಳಕ ತೋರಿದರು. ಫೀಲ್ಡ್‌ ಗೋಲು ಗಳಿಸಿದ ಅವರು ಬೆಲ್ಜಿಯಂ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

ಇಂದಿನ ಪಂದ್ಯಗಳು

ಜರ್ಮನಿ–ಮಲೇಷ್ಯಾ

ಆರಂಭ: ಸಂಜೆ 5

ಪಾಕಿಸ್ತಾನ–ನೆದರ್ಲೆಂಡ್ಸ್‌

ಆರಂಭ: ರಾತ್ರಿ 7

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌/ದೂರದರ್ಶನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !