ಹಾಕಿ: ಯುನೈಟೆಡ್‌ಗೆ ಭರ್ಜರಿ ಗೆಲುವು

7

ಹಾಕಿ: ಯುನೈಟೆಡ್‌ಗೆ ಭರ್ಜರಿ ಗೆಲುವು

Published:
Updated:

ಬೆಂಗಳೂರು: ವಿಮಲ್‌ ಮತ್ತು ವಿವೇಕ್ ಉತ್ತಪ್ಪ ಅವರ ಅಮೋಘ ಆಟದ ಬಲದಿಂದ ಬೆಂಗಳೂರು ಯುನೈಟೆಡ್ ಹಾಕಿ ಕ್ಲಬ್‌ ಭರ್ಜರಿ ಜಯ ಸಾಧಿಸಿತು. ಬೆಂಗಳೂರು ಹಾಕಿ ಸಂಸ್ಥೆ ಆಯೋಜಿಸಿರುವ ‘ಬಿ’ ಡಿವಿಷನ್‌ನ ಬುಧವಾರದ ಪಂದ್ಯದಲ್ಲಿ ಈ ತಂಡ ನವೀನ್ ಹಾಕಿ ಕ್ಲಬ್‌ ವಿರುದ್ಧ 6–3ರಿಂದ ಗೆದ್ದಿತು.

ಯುನೈಟೆಡ್ ಪರವಾಗಿ ಸುನಿಲ್‌ (19ನೇ ನಿಮಿಷ), ವಿಮಲ್‌ (29, 35ನೇ ನಿ), ವಿವೇಕ್ ಉತ್ತಪ್ಪ (43,57ನೇ ನಿ) ಮತ್ತು ನಿಖಿಲ್‌ (47ನೇ ನಿ) ಗೋಲು ಗಳಿಸಿದರೆ, ನವೀನ್ ತಂಡದ ಪರ ಪ್ರೇಮಯ್ಯ (9, 41ನೇ ನಿ) ಮತ್ತು ಲೋಕೇಶ್‌ (58ನೇ ನಿ) ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ರೈಸಿಂಗ್ ಸ್ಟಾರ್ ಹಾಕಿ ಕ್ಲಬ್‌ 5–2ರಿಂದ ಅರಿಸ್ಟೋಕ್ರೇಟ್‌ ಹಾಕಿ ಕ್ಲಬ್‌ ವಿರುದ್ಧ ಗೆದ್ದಿತು. ರೈಸಿಂಗ್ ಸ್ಟಾರ್‌ಗಾಗಿ ಸುಂದರ್‌ ರಾಜ್‌ (24ನೇ ನಿ), ಚೆಂಗಪ್ಪ (25ನೇ ನಿ), ನಾಸರುದ್ದೀನ್‌ (29ನೇ ನಿ), ಪವನ್‌ ಕುಮಾರ್ (37ನೇ ನಿ) ಮತ್ತು ಅಭ್ಯದಯ್‌ (40ನೇ ನಿ) ಗೋಲು ಗಳಿಸಿದರು. ಅರಿಸ್ಟೋಕ್ರೇಟ್‌ಗಾಗಿ ಜೋಸೆಫ್‌ (55ನೇ ನಿ) ಮತ್ತು ಎಲಿಯಾ (56ನೇ ನಿ) ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !