ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಚಮ್ಮ ಡಬಲ್‌ ಹ್ಯಾಟ್ರಿಕ್‌

ರಾಜ್ಯಮಟ್ಟದ ಸಬ್‌ಜೂನಿಯರ್‌ ಮಹಿಳಾ ಹಾಕಿ ಟೂರ್ನಿ
Last Updated 27 ನವೆಂಬರ್ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ದೇಚಮ್ಮ ಡಬಲ್‌ ಹ್ಯಾಟ್ರಿಕ್‌ ಗೋಲು ಹೊಡೆದರು. ಅವರ ಅಮೋಘ ಆಟದ ನೆರವಿನಿಂದ ಡಿವೈಇಎಸ್‌ ಪೊನ್ನಂಪೇಟೆ ತಂಡವುಇಲ್ಲಿನ ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಅರೆನಾದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಬ್‌ಜೂನಿಯರ್‌ ಮಹಿಳಾ ಹಾಕಿ ಟೂರ್ನಿಯಲ್ಲಿ ಡಿವೈಇಎಸ್‌ ಶಿವಮೊಗ್ಗ ತಂಡವನ್ನು 14–0 ಅಂತರದಿಂದ ಮಣಿಸಿತು.

ದೇಚಮ್ಮ (2, 15, 21, 28,33 ಹಾಗೂ 38ನೇ ನಿಮಿಷ) ಭರ್ಜರಿ ಆಟವಾಡಿದರು. ಸುಫಾನಾ ಬಿ. (5, 31, 37ನೇ ನಿಮಿಷ) ಹ್ಯಾಟ್ರಿಕ್‌ ಗಳಿಸಿದರೆ, ನಿಸರ್ಗ ಎಸ್‌.ಬಿ. (7, 17ನೇ ನಿಮಿಷ), ಜೀವಿತಾ ಬಿ.ಜಿ. (8, 26ನೇ ನಿಮಿಷ) ತಲಾ ಎರಡು ಗೋಲು ಹಾಗೂ ತುಷಾರಾ ಎಚ್‌.ಆರ್‌. (14ನೇ ನಿಮಿಷ) ಒಂದು ಗೋಲು ಹೊಡೆದರು. ಈ ಪಂದ್ಯ ನವೆಂಬರ್‌ 30ರಂದು ನಡೆಯಬೇಕಿತ್ತು. ಆದರೆ ಬುಧವಾರವೇ ಆಡಿಸಲಾಯಿತು.

ಇನ್ನೊಂದು ಪಂದ್ಯದಲ್ಲಿ ಡಿವೈಇಎಸ್‌ ಕೂಡಿಗೆ ತಂಡವು ಡಿವೈಇಎಸ್‌ ಶಿವಮೊಗ್ಗ ಎದುರು 6–1ರಿಂದ ಗೆದ್ದಿತು. ಕೂಡಿಗೆ ಪರ ಕೌಸಲ್ಯಾ (2, 29ನೇ ನಿಮಿಷ), ಅನನ್ಯಾ ಎನ್‌.ಎ. (4, 38ನೇ ನಿಮಿಷ) ತಲಾ ಎರಡು ಹಾಗೂ ನಿಶ್ಚಿತಾ (6ನೇ ನಿಮಿಷ) ಮತ್ತು ಈರಮ್ಮ (30ನೇ ನಿಮಿಷ) ಒಂದು ಗೋಲು ದಾಖಲಿಸಿದರು. ಶಿವಮೊಗ್ಗದ ಸೌರಭ 35ನೇ ನಿಮಿಷ ಯಶಸ್ಸು ಕಂಡರು.

ದಿನದ ಇನ್ನೊಂದು ಪಂದ್ಯದಲ್ಲಿ ಯಮುನಾ ಅವರ ನಾಲ್ಕು ಗೋಲುಗಳ (10, 29, 31, 34ನೇ ನಿಮಿಷ) ಬಲದಿಂದ ಡಿವೈಇಎಸ್‌ ಹಾಸನ ತಂಡವು ಡಿವೈಇಎಸ್‌ ಧಾರವಾಡ ತಂಡದ ಎದುರು 7–0ಯಿಂದ ಗೆದ್ದಿತು. ವಿಜಯೀ ತಂಡದ ಪರ ಸಹನಾ ಸಿ.ಎಂ (7 ಹಾಗೂ 9ನೇ ನಿಮಿಷ) ಹಾಗೂ ಸೌಮ್ಯ (30ನೇ ನಿಮಿಷ) ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT