ಇಂಡಿಯಾ ಹಾಕಿ ರಾಯಭಾರಿ ಸರ್ದಾರ್‌ ಸಿಂಗ್‌

7

ಇಂಡಿಯಾ ಹಾಕಿ ರಾಯಭಾರಿ ಸರ್ದಾರ್‌ ಸಿಂಗ್‌

Published:
Updated:

ನವದೆಹಲಿ: ಅಂತರರಾಷ್ಟ್ರೀಯ ಹಾಕಿಗೆ ಬುಧವಾರ ನಿವೃತ್ತಿ ಘೋಷಿಸಿದ ಸರ್ದಾರ್‌ ಸಿಂಗ್‌ ಅವರ ಸಾಧನೆಯನ್ನು ಹಾಕಿ ಇಂಡಿಯಾ ಸ್ಮರಿಸಿಕೊಂಡಿದೆ. 

‘ಎಂತಹ ಪರಿಸ್ಥಿತಿಯಲ್ಲೂ ಕುಗ್ಗದ ಸರ್ದಾರ್‌ ನಿಜಕ್ಕೂ ಶ್ರೇಷ್ಠ ಆಟಗಾರ. ಭಾರತ ಹಾಕಿ ತಂಡದ ಬೆಳವಣಿಗೆಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ನೈಜ ಅರ್ಥದಲ್ಲಿ ಅವರೊಬ್ಬ ಹಾಕಿ ಕ್ರೀಡೆಯ ರಾಯಭಾರಿ’ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ರಜೀಂದರ್‌ ಸಿಂಗ್‌ ಹೇಳಿದ್ದಾರೆ. 

‘ನಾಯಕನಾಗಿ ಹಾಗೂ ಆಟಗಾರನಾಗಿ ಅವರು ತೋರಿದ ಸಾಮರ್ಥ್ಯ ಯುವ ಆಟಗಾರರಿಗೆ ಸ್ಪೂರ್ತಿ. 2014ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಚಾಂಪಿಯನ್‌ ಆಗಿತ್ತು. ಆಗ ತಂಡವನ್ನು ಮುನ್ನಡೆಸಿದವರು ಸರ್ದಾರ್‌ ಸಿಂಗ್‌. ಭಾರತ ಹಾಕಿ ತಂಡ ತನ್ನ ವೈಫಲ್ಯದಿಂದ ಮೈಕೊಡವಿ ಮೇಲೆಳಲು ಅವರು ಪ್ರಮುಖ ಕಾರಣ’ ಎಂದು ಅವರು ತಿಳಿಸಿದ್ದಾರೆ. 

‘ಅವರ ಮಾಡಿದ ಸಾಧನೆಯನ್ನು ನಾವು ಸದಾ ಸ್ಮರಿಸಿಕೊಳ್ಳುತ್ತೇವೆ. ಈ ಆಟಗಾರನ ಮುಂದಿನ ಜೀವನಕ್ಕೆ ಒಳಿತಾಗಲಿ’ ಎಂದೂ ತಿಳಿಸಿದ್ದಾರೆ.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !