ಗುರುವಾರ , ಅಕ್ಟೋಬರ್ 24, 2019
21 °C

ಹಾಕಿ ಶಿಬಿರಕ್ಕೆ 22 ಮಂದಿ ಆಯ್ಕೆ

Published:
Updated:

ನವದೆಹಲಿ: ಹಾಕಿ ಇಂಡಿಯಾ ರಾಷ್ಟ್ರೀಯ ಮಹಿಳಾ ಶಿಬಿರಕ್ಕೆ ಶನಿವಾರ 33 ಮಂದಿಯನ್ನು ಆಯ್ಕೆ ಮಾಡಿದೆ. ಎಫ್‌ಐಎಚ್‌ ಒಲಿಂಪಿಕ್‌ ಕ್ವಾಲಿಫೈಯರ್ಸ್‌ ಟೂರ್ನಿಯ ಸಿದ್ಧತೆಗಾಗಿ ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಅಕ್ಟೋಬರ್‌ 14ರಿಂದ ಶಿಬಿರ ನಡೆಯಲಿದೆ.

ನವೆಂಬರ್‌ 1 ಮತ್ತು 2ರಂದು ಅಮೆರಿಕ ತಂಡದ ವಿರುದ್ಧ ಭಾರತ ಎಫ್‌ಐಎಚ್‌ ಕ್ವಾಲಿಫೈಯರ್ಸ್‌ನ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಇಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದರೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬಹುದಾಗಿದೆ.

ಇತ್ತೀಚೆಗೆ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದ ರಾಣಿ ರಾಂಪಾಲ್‌ ನೇತೃತ್ವದ ತಂಡ ಉತ್ತಮ ಆಟವಾಡಿತ್ತು. ಇಂಗ್ಲೆಂಡ್‌ ವಿರುದ್ಧ ಮೊದಲ ಪಂದ್ಯದಲ್ಲಿ 2–1ರಿಂದ ಜಯ ಸಾಧಿಸಿ, ಸತತ ಮೂರು ಪಂದ್ಯಗಳಲ್ಲಿ ಡ್ರಾ (1–1, 0–0, 2–2) ಸಾಧಿಸಿತ್ತು. ಕೊನೆಯ ಪಂದ್ಯದಲ್ಲಿ ಮಾತ್ರ 1–3ರಿಂದ ಸೋಲು ಕಂಡಿತ್ತು.

ತಂಡ: ಸವಿತಾ, ರಜಿನಿ ಎತಿಮರ್ಪು, ದೀಪ್‌ ಗ್ರೇಸ್‌ ಎಕ್ಕಾ, ರೀನಾ ಖೋಕರ್‌, ಸಲೀಮಾ ಟೇಟ್‌, ಗುರ್ಜಿತ್‌ ಕೌರ್‌, ಉದಿತಾ, ನಿಕ್ಕಿ ಪ್ರಧಾನ್‌, ನಿಶಾ, ಸುಶೀಲಾ ಚಾನು ಪುಖ್ರಂಬಮ್‌, ಮೋನಿಕಾ, ಲಿಲಿಮಾ ಮಿಂಜ್‌, ನೇಹಾ ಗೋಯಲ್‌, ನಮಿತಾ ಟೊಪ್ಪೊ, ಸೋನಿಕಾ, ರಾಣಿ ರಾಂಪಾಲ್‌, ನವನೀತ್‌ ಕೌರ್‌, ಲಾಲ್‌ರೆಮ್ಸಿಯಾಮಿ, ನವಜೋತ್‌ ಕೌರ್‌, ಶರ್ಮಿಳಾ ದೇವಿ, ಜ್ಯೋತಿ, ವಂದನಾ ಕಟಾರಿಯಾ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)