ಶನಿವಾರ, ಸೆಪ್ಟೆಂಬರ್ 21, 2019
21 °C

ಹಾಕಿ ತಂಡದಲ್ಲಿ ಕನ್ನಡಿಗ ಸೂರ್ಯ

Published:
Updated:

ನವದೆಹಲಿ (ಪಿಟಿಐ): ಕನ್ನಡಿಗ ಸೂರ್ಯ ಎನ್‌.ಎಂ. ಅವರು ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಹಾಕಿ ಟೂರ್ನಿಗೆ ಪ್ರಕಟಿಸಲಾದ 33 ಜೂನಿಯರ್‌ ಸಂಭವನೀಯ ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ. ಪಟ್ಟಿಯನ್ನು ಶನಿವಾರ ಪ್ರಕ ಟಿಸಲಾಗಿದೆ. ಟೂರ್ನಿಗಾಗಿ ನಾಲ್ಕು ವಾರಗಳ ರಾಷ್ಟ್ರೀಯ ತರಬೇತಿ ಶಿಬಿರ ಸೋಮವಾರದಿಂದ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ(ಸಾಯ್‌) ನಡೆಯಲಿದೆ. ಮಲೇಷ್ಯಾದಲ್ಲಿ ಅಕ್ಟೋಬರ್‌ 12ರಿಂದ ಜೋಹರ್‌ ಕಪ್‌ ಟೂರ್ನಿ ನಡೆಯಲಿದೆ.

ಗೋಲುಕೀಪರ್ಸ್: ಪವನ್‌, ಪ್ರಶಾಂತ್‌ ಕುಮಾರ್‌ ಚೌಹಾನ್‌, ಸಾಹಿಲ್‌ ಕುಮಾರ್‌. ಡಿಫೆಂಡರ್ಸ್: ಸುಮನ್‌ ಬೆಕ್‌, ಪ್ರತಾಪ್‌ ಲಾಕ್ರಾ, ಸಂಜಯ್‌, ಯಶದೀಪ್‌ ಸಿವಾಚ್‌, ಮನದೀಪ್‌ ಮೋರ್‌, ಪರಮ್‌ಪ್ರೀತ್‌ ಸಿಂಗ್‌, ದಿನಾಚಂದ್ರ ಸಿಂಗ್‌ ಮೊಯಿರಂಗ್‌ದೆಮ್‌, ನಬಿನ್‌ ಕುಜುರ್‌, ಶಾರದಾನಂದ ತಿವಾರಿ, ನೀರಜ್‌ಕುಮಾರ್‌ ವಾರಿಬಮ್‌. ಮಿಡ್‌ಫೀಲ್ಡರ್ಸ್: ಸುಖ್‌ಮನ್‌ ಸಿಂಗ್‌, ಗ್ರೆಗೊರಿ ಕ್ಸೆಸ್‌, ಅಂಕಿತ್‌ ಪಾಲ್‌, ಆಕಾಶದೀಪ್‌ ಸಿಂಗ್‌ ಜೂನಿಯರ್‌, ರಬಿಚಂದ್ರ ಸಿಂಗ್‌ ಮೊಯಿರಂಗ್‌ದೆಮ್‌, ವಿಷ್ಣುಕಾಂತ್‌ ಸಿಂಗ್‌, ಗೋಪಿ ಕುಮಾರ್‌ ಸೋಂಕರ್‌, ವಿಶಾಲ್‌ ಅಂಟಿಲ್‌, ಸೂರ್ಯ ಎನ್‌.ಎಂ, ಮಣಿಂದರ್‌ ಸಿಂಗ್‌. ಫಾರ್ವಡ್ಸ್: ಸುದೀಪ್‌ ಚಿರ್ಮಾಕೊ, ರಾಹುಲ್‌ ಕುಮಾರ್‌ ರಾಜಭರ್‌, ಉತ್ತಮ್‌ಸಿಂಗ್‌, ಎಸ್‌. ಕಾರ್ತಿ, ದಿಲ್‌ಪ್ರೀತ್‌ ಸಿಂಗ್‌, ಅರೈಜೀತ್‌ ಸಿಂಗ್‌ ಹುಂದಲ್‌, ಅಮನ್‌ದೀಪ್‌ ಸಿಂಗ್‌, ಪ್ರಭ್‌ಜೋತ್‌ ಸಿಂಗ್‌, ಶಿವಂ ಆನಂದ್‌, ಅರ್ಷದೀಪ್‌ ಸಿಂಗ್‌.

Post Comments (+)