ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಮುಕ್ಕಾಟಿರ ತಂಡಕ್ಕೆ ಜಯ

Last Updated 25 ಏಪ್ರಿಲ್ 2019, 19:35 IST
ಅಕ್ಷರ ಗಾತ್ರ

ಮಡಿಕೇರಿ: ಮುಕ್ಕಾಟಿರ ತಂಡದವರು ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗುರುವಾರ ಗೆಲುವು ಸಾಧಿಸಿದರು.

ಕಾಕೋಟುಪರಂಬು ಮೈದಾನದಲ್ಲಿ ಹಾಕಿ ಕೂರ್ಗ್‌ ಆಶ್ರಯದಲ್ಲಿ ನಡೆದ ಪಂದ್ಯದಲ್ಲಿ ಮುಕ್ಕಾಟಿರ ತಂಡವು 2-1 ಗೋಲುಗಳಿಂದ ಶಾಂತೆಯಂಡ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ನಾಣಯ್ಯ ಹಾಗೂ ಕಾವ್ಯಾ ತಲಾ ಒಂದು ಗೋಲು ತಂದಿತ್ತರು. ಶಾಂತೆಯಂಡ ಪರ ತಿಮ್ಮಯ್ಯ ಏಕೈಕ ಗೋಲು ಗಳಿಸಿದರು.

ಕಂಗಾಂಡ ತಂಡವು 4-2 ಗೋಲುಗಳಿಂದ ‘ಟೈಬ್ರೇಕರ್‌’ನಲ್ಲಿ ಬೊಳ್ಳಚೇಟ್ಟಿರ ತಂಡವನ್ನು ಮಣಿಸಿತು. ನಿಗದಿತ ಸಮಯದಲ್ಲಿ ಫಲಿತಾಂಶವು 1–1ರಲ್ಲಿ ಸಮಬಲವಾಗಿತ್ತು. ನಾಗಂಡ ತಂಡವು 3-0 ಗೋಲುಗಳಿಂದ ಬಲ್ಲಂಡ ತಂಡವನ್ನು ಸೋಲಿಸಿತು. ಪೆಮ್ಮಂಡ ತಂಡವು 4-0 ಗೋಲುಗಳಿಂದ ತಾಪಂಡ ವಿರುದ್ಧ; ಬಯವಂಡ ತಂಡವು 5-4 ಗೋಲುಗಳಿಂದ ಮುಂಡ್ಯೋಳಂಡದ ಎದುರು; ಐನಂಡ ತಂಡವು 5-0 ಗೋಲುಗಳಿಂದ ಬಲ್ಲಡಿಚಂಡ ಮೇಲೆ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT