ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಣಿಕ್‌, ಆಯನೂರು ಮತಯಾಚನೆ

ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ
Last Updated 2 ಜೂನ್ 2018, 6:38 IST
ಅಕ್ಷರ ಗಾತ್ರ

ಉಡುಪಿ: ನೈರುತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್ ಹಾಗೂ ಪದವೀಧರರ ಕ್ಷೇತ್ರದಿಂದ ಆಯನೂರು ಮಂಜುನಾಥ್‌ ಅವರು ಸ್ಪರ್ಧಿಸಿದ್ದಾರೆ. ಜೂನ್‌ 8ರಂದು ನಡೆಯಲಿರುವ ಚುನಾವಣೆಯಲ್ಲಿ ಇಬ್ಬರನ್ನೂ ಗೆಲ್ಲಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಮನವಿ ಮಾಡಿದರು.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ಅಭ್ಯರ್ಥಿ ಗಳು ಜಿಲ್ಲೆಯ ಹಲವೆಡೆ ಪ್ರಚಾರ ನಡೆಸಲಿದ್ದಾರೆ. ನಂತರ ಆಯಾಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಮತಯಾಚನೆ ನಡೆಯಲಿದೆ ಎಂದರು.

ಜಿಲ್ಲೆಯಲ್ಲಿ 9 ಮತದಾನ ಕೇಂದ್ರ ಗಳಿದ್ದು, ಉಡುಪಿಯಲ್ಲಿ ಹೆಚ್ಚು ಮತದಾ ರರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,762 ಶಿಕ್ಷಕರು ಹಾಗೂ 8,276 ಪದವೀಧರ ಮತದಾರು ಇದ್ದಾರೆ. ಉಡುಪಿ ಬುದ್ಧಿ ವಂತರ ಜಿಲ್ಲೆ ಎಂಬ ಖ್ಯಾತಿ ಪಡೆದಿದೆ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದಂತೆ ಈಬಾರಿಯೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

‘ಸಾಮಾನ್ಯ ಚುನಾವಣೆಯಲ್ಲಿ ಅಸಿಂಧುವಾಗುವ ಮತಗಳ ಪ್ರಮಾಣ ಶೇ 1ರಷ್ಟಿದ್ದರೆ, ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತಗಳ ಅಸಿಂಧು ಪ್ರಮಾಣ ಶೇ 8ರಿಂದ11ರಷ್ಟಿರುತ್ತದೆ. ಹಾಗಾಗಿ ಮತದಾರರು ಪ್ರಾಶಸ್ತ್ಯದ ಮತ ಹಾಕುವಾಗ ಜಾಗ್ರತೆಯಿಂದ ಚಲಾಯಿ ಸಬೇಕು. ಮತಗಟ್ಟೆ ಅಧಿಕಾರಿ ಕೊಟ್ಟ ಪೆನ್‌ ಬಳಸಿ, ನಿಯಮಗಳಿಗೆ ಅನುಸಾ ರವಾಗಿ ಮತ ಹಾಕಬೇಕು’ ಎಂದು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಗಣೇಶ್‌ ಕಾರ್ಣಿಕ್‌ ಮನವಿ ಮಾಡಿದರು.

ಪದವೀಧರರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ‘ಎಲ್ಲೆಡೆ ಬಿಜೆಪಿಗೆ ಅನುಕೂ ಲವಾದ ವಾತಾವರಣ ಕಂಡುಬರುತ್ತಿದೆ.  ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ಪ್ರತಿಯೊಂದು ಶಾಲಾ ಕಾಲೇಜುಗಳ ಮತದಾರರ ಪಟ್ಟಿಯನ್ನು ತಯಾರಿಸಿ ಮತದಾರರ ಸಂಪರ್ಕ ಮಾಡಲಾಗಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಬಿಜೆಪಿಗೆ ಅನ್ಯಾಯ ಮಾಡಿದೆ ಎಂಬ ವಿಚಾರ ಜನರ ಮನಸ್ಸಿನಲ್ಲಿರುವುದು ಗೆಲುವಿಗೆ ನೆರವಾಗಲಿದೆ’ ಎಂದರು.

ಹಿಂದೆ, ಶಾಸಕನಾಗಿ, ಸಂಸದನಾಗಿ ಕೆಲಸ ಮಾಡಿದ ಅನುಭವ ಇದೆ. ಕಾರ್ಮಿಕರ ಸಂಘಟನೆಗಳ ಜತೆ ಸೇರಿಕೊಂಡು ಹೋರಾಟ ಮಾಡಿದ್ದೇನೆ. ಇವೆಲ್ಲ ಅಂಶಗಳು ಗೆಲುವಿಗೆ ಪೂರಕವಾಗಲಿವೆ ಎಂದರು.

ಬಿಜೆಪಿ ಸಾಧನೆಗಳೇ ಶ್ರೀರಕ್ಷೆ

‘ಹಿಂದೆ ಬಿಜೆಪಿ ಅವಧಿಯ ಐದು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಎದುರಿಸುತ್ತಿದ್ದೇವೆ. ಹಾಗೆಯೇ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿನ ವೈಫಲ್ಯಗಳನ್ನು ಮತದಾರರಿಗೆ ಮನದಟ್ಟು ಮಾಡಿಸಲಾಗುತ್ತಿದೆ’ ಎಂದು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಗಣೇಶ್‌ ಕಾರ್ಣಿಕ್‌ ತಿಳಿಸಿದರು.

191 ಸರ್ಕಾರಿ ಪದವಿ ಕಾಲೇಜು, 11 ಸರ್ಕಾರಿ ತಾಂತ್ರಿಕ ವಿದ್ಯಾಲಯ, 6 ವೈದ್ಯಕೀಯ ಕಾಲೇಜು, ₹4,800 ಕೋಟಿ ಅನುದಾನ ತಂದು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ ಎಂದರು.

**
ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕರು ಅಧಿಕಾರದಲ್ಲಿ ಇರುವುದರಿಂದ ಗೆಲುವಿನ ಸಾಧ್ಯತೆಗಳು ಹೆಚ್ಚಾಗಿವೆ
- ಆಯನೂರು ಮಂಜುನಾಥ್,  ಪದವೀಧರರ ಕ್ಷೇತ್ರದ ಅಭ್ಯರ್ಥಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT