ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ತಂಡಕ್ಕೆ ಮರಳಿದ ರೂಪಿಂದರ್‌,ಲಲಿತ್‌

ಬೆಲ್ಜಿಯಂ ಪ್ರವಾಸಕ್ಕೆ ಭಾರತ ಹಾಕಿ ತಂಡ ಪ್ರಕಟ: ಕನ್ನಡಿಗ ಸುನಿಲ್‌ಗೆ ಅವಕಾಶ
Last Updated 20 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ಡ್ರ್ಯಾಗ್‌ಫ್ಲಿಕ್‌ ಪರಿಣತ ರೂಪಿಂದರ್‌ ಪಾಲ್‌ ಸಿಂಗ್‌ ಮತ್ತು ಮುಂಚೂಣಿ ವಿಭಾಗದ ಆಟಗಾರ ಲಲಿತ್‌ಕುಮಾರ್‌ ಉಪಾಧ್ಯಾಯ ಅವರು ಭಾರತ ಹಾಕಿ ತಂಡಕ್ಕೆ ಮರಳಿದ್ದಾರೆ. ಕನ್ನಡಿಗ ಎಸ್‌.ವಿ.ಸುನಿಲ್‌ ಅವರೂ ಅವಕಾಶ ಪಡೆದಿದ್ದಾರೆ.

ಇದೇ ತಿಂಗಳ 26ರಿಂದ ಅಕ್ಟೋಬರ್‌ 3ರವರೆಗೆ ಭಾರತ ತಂಡವು ಬೆಲ್ಜಿಯಂ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕಾಗಿ ಶುಕ್ರವಾರ ಹಾಕಿ ಇಂಡಿಯಾ (ಎಚ್‌ಐ) 20 ಸದಸ್ಯರ ತಂಡ ಪ್ರಕಟಿಸಿದೆ.

ಪ್ರವಾಸದ ವೇಳೆ ಮನಪ್ರೀತ್‌ ಸಿಂಗ್‌ ಬಳಗವು ಬೆಲ್ಜಿಯಂ ಮತ್ತು ಸ್ಪೇನ್‌ ತಂಡಗಳ ವಿರುದ್ಧ ಕ್ರಮವಾಗಿ ಮೂರು ಮತ್ತು ಎರಡು ಪಂದ್ಯಗಳನ್ನು ಆಡಲಿದೆ.ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಕೂಡಾ ತಂಡಕ್ಕೆ ಮರಳಿದ್ದಾರೆ.

‘ರೂಪಿಂದರ್‌ ಮತ್ತು ಲಲಿತ್‌ ತಂಡಕ್ಕೆ ಮರಳಿರುವುದು ಖುಷಿಯ ವಿಚಾರ. ಇವರಿಬ್ಬರ ಸೇರ್ಪಡೆಯಿಂದ ತಂಡದ ಶಕ್ತಿ ಇಮ್ಮಡಿಸಿದೆ. ಒಲಿಂಪಿಕ್‌ ಅರ್ಹತಾ ಟೂರ್ನಿಗೆ ಸಿದ್ಧತೆ ಕೈಗೊಳ್ಳಲು ಬೆಲ್ಜಿಯಂ ಪ್ರವಾಸ ನೆರವಾಗಲಿದೆ. ಬೆಲ್ಜಿಯಂ ಮತ್ತು ಸ್ಪೇನ್‌ ವಿರುದ್ಧ ನಮ್ಮ ತಂಡವು ಉತ್ತಮ ಸಾಮರ್ಥ್ಯ ತೋರಲಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಪಿ.ಆರ್‌.ಶ್ರೀಜೇಶ್‌ ಮತ್ತು ಕೃಷ್ಣ ಬಿ.ಪಾಠಕ್‌.

ಡಿಫೆಂಡರ್‌ಗಳು: ಹರ್ಮನ್‌ಪ್ರೀತ್‌ ಸಿಂಗ್‌ (ಉಪ ನಾಯಕ), ಸುರೇಂದರ್‌ ಕುಮಾರ್‌, ಬೀರೇಂದ್ರ ಲಾಕ್ರಾ, ವರುಣ್‌ ಕುಮಾರ್‌, ಅಮಿತ್‌ ರೋಹಿದಾಸ್‌, ಗುರಿಂದರ್‌ ಸಿಂಗ್‌, ಕೊಥಾಜಿತ್‌ ಸಿಂಗ್‌ ಮತ್ತು ರೂಪಿಂದರ್‌ಪಾಲ್‌ ಸಿಂಗ್‌.

ಮಿಡ್‌ಫೀಲ್ಡರ್‌ಗಳು: ಮನಪ್ರೀತ್‌ ಸಿಂಗ್‌ (ನಾಯಕ), ಹಾರ್ದಿಕ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌ ಮತ್ತು ನೀಲಕಂಠ ಶರ್ಮಾ.

ಫಾರ್ವರ್ಡ್‌ಗಳು: ಮನದೀಪ್‌ ಸಿಂಗ್‌, ಎಸ್‌.ವಿ.ಸುನಿಲ್‌, ಲಲಿತ್‌ಕುಮಾರ್‌ ಉಪಾಧ್ಯಾಯ, ರಮಣದೀಪ್‌ ಸಿಂಗ್‌, ಸಿಮ್ರನ್‌ಜೀತ್‌ ಸಿಂಗ್‌ ಮತ್ತು ಆಕಾಶದೀಪ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT