ಹಾಕಿ: ಆಸ್ಟ್ರೇಲಿಯಾಗೆ ಇಂಗ್ಲೆಂಡ್‌ ಸವಾಲು

7

ಹಾಕಿ: ಆಸ್ಟ್ರೇಲಿಯಾಗೆ ಇಂಗ್ಲೆಂಡ್‌ ಸವಾಲು

Published:
Updated:
Deccan Herald

ಭುವನೇಶ್ವರ: ಹಾಕಿ ವಿಶ್ವಕಪ್‌ನಲ್ಲಿ ‘ಹ್ಯಾಟ್ರಿಕ್‌’ ಪ್ರಶಸ್ತಿ ಜಯದ ಕನಸು ಕಾಣುತ್ತಿರುವ ಆಸ್ಟ್ರೇಲಿಯಾ ತಂಡ ಈ ಹಾದಿಯಲ್ಲಿ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ‘ಬಿ’ ಗುಂಪಿನ ಹೋರಾಟದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ಸವಾಲು ಎದುರಿಸಲಿದೆ.

ಎಡ್ಡಿ ಒಕೆಂಡೆನ್‌ ಸಾರಥ್ಯದ ಆಸ್ಟ್ರೇಲಿಯಾ, ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್‌ ಎದುರು ಪ್ರಯಾಸದ ಗೆಲುವು ದಾಖಲಿಸಿತ್ತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈ ತಂಡ ಆಂಗ್ಲರ ನಾಡಿನ ತಂಡದ ವಿರುದ್ಧ 9–2ರ ಗೆಲುವಿನ ದಾಖಲೆ ಹೊಂದಿದೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳು 10 ಸಲ ಮುಖಾಮುಖಿಯಾಗಿವೆ. ಈ ಪೈಕಿ ಆಸ್ಟ್ರೇಲಿಯಾ ಎಂಟರಲ್ಲಿ ವಿಜಯಿಯಾಗಿದೆ. ಹಿಂದಿನ ಈ ಸಾಧನೆ ತಂಡದ ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಫಿಲ್‌ ರೋಪರ್‌ ಮುಂದಾಳತ್ವದ ಇಂಗ್ಲೆಂಡ್‌ ಕೂಡಾ ಜಯದ ಮಂತ್ರ ಜಪಿಸುತ್ತಿದೆ. ಈ ತಂಡ ತನ್ನ ಮೊದಲ ಹೋರಾಟದಲ್ಲಿ ಚೀನಾ ವಿರುದ್ಧ
2–2 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು.

ಡೇವಿಡ್‌ ಅಮೆಸ್‌, ಇಯಾನ್‌ ಸ್ಲೋವನ್‌, ಮಾರ್ಕ್‌ ಗ್ಲೆಗೋರ್ನ್‌ ಮತ್ತು ಆ್ಯಡಮ್‌ ಡಿಕ್ಸನ್‌ ಅವರು ಈ ತಂಡದ ಶಕ್ತಿಯಾಗಿದ್ದಾರೆ.

ಚೀನಾ–ಐರ್ಲೆಂಡ್‌ ಪೈಪೋಟಿ: ಇನ್ನೊಂದು ಪಂದ್ಯದಲ್ಲಿ ಚೀನಾ ಮತ್ತು ಐರ್ಲೆಂಡ್‌ ತಂಡಗಳು ಪೈಪೋಟಿ ನಡೆಸಲಿವೆ.

ಉಭಯ ತಂಡಗಳು ಇದುವರೆಗೂ ಎರಡು ಸಲ ಎದುರಾಗಿದ್ದು ಎರಡೂ ಪಂದ್ಯಗಳಲ್ಲೂ ಐರ್ಲೆಂಡ್‌ ವಿಜಯಿಯಾಗಿದೆ. ಮಂಗಳವಾರದ ಹಣಾಹಣಿಯಲ್ಲೂ ಐರ್ಲೆಂಡ್‌ ತಂಡ ಎದುರಾಳಿಗಳನ್ನು ಸುಲಭವಾಗಿ ಮಣಿಸುವ ಹುಮ್ಮಸ್ಸಿನಲ್ಲಿದೆ. ಚೊಚ್ಚಲ ವಿಶ್ವಕಪ್‌ ಆಡುತ್ತಿರುವ ಚೀನಾ ಕೂಡಾ ಜಯದ ಕನವರಿಕೆಯಲ್ಲಿದೆ.

 ಇಂದಿನ ಪಂದ್ಯಗಳು

ಇಂಗ್ಲೆಂಡ್‌–ಆಸ್ಟ್ರೇಲಿಯಾ

ಆರಂಭ: ಸಂಜೆ 5.00

ಐರ್ಲೆಂಡ್‌–ಚೀನಾ

ಆರಂಭ: ರಾತ್ರಿ 7.00

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌/ದೂರದರ್ಶನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !