ಹಾಕಿ ವಿಶ್ವಕಪ್‌ಗೆ ಸುನಿಲ್‌ ಅಲಭ್ಯ?

7

ಹಾಕಿ ವಿಶ್ವಕಪ್‌ಗೆ ಸುನಿಲ್‌ ಅಲಭ್ಯ?

Published:
Updated:
Deccan Herald

ಭುವನೇಶ್ವರ: ಭಾರತದ ಸ್ಟ್ರೈಕರ್‌ ಎಸ್‌.ವಿ.ಸುನಿಲ್‌ ಅವರು ಮುಂದಿನ ತಿಂಗಳು ನಡೆಯುವ ಹಾಕಿ ವಿಶ್ವಕಪ್‌ನಲ್ಲಿ ಆಡುವುದು ಅನುಮಾನ ಎನಿಸಿದೆ.

ಇಲ್ಲಿ ನಡೆಯುತ್ತಿರುವ ಪೂರ್ವಸಿದ್ಧತಾ ತರಬೇತಿ ಶಿಬಿರದ ವೇಳೆ ಕರ್ನಾಟಕದ ಸುನಿಲ್‌ ಅವರ ಎಡಗಾಲಿನ ಮಂಡಿಗೆ ಗಾಯವಾಗಿದೆ. 

‘ಅಕ್ಟೋಬರ್‌ ನಾಲ್ಕರಂದು ನಡೆದ ತರಬೇತಿಯ ವೇಳೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಡೈವ್‌ ಮಾಡಿದಾಗ ಎಡಗಾಲಿನ ಮಂಡಿಗೆ ಬಲವಾದ ಪೆಟ್ಟು ಬಿದ್ದಿತ್ತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದು ನಾಲ್ಕರಿಂದ ಐದು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ’ ಎಂದು ಸುನಿಲ್‌ ತಿಳಿಸಿದ್ದಾರೆ.

ಹಾಕಿ ವಿಶ್ವಕಪ್‌ ನವೆಂಬರ್‌ 28ರಿಂದ ಡಿಸೆಂಬರ್‌ 16ರವರೆಗೆ ಕಳಿಂಗ ಕ್ರೀಡಾಂಗಣದಲ್ಲಿ ಜರುಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !