ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಎಚ್‌ಎ ‘ಎ’ ಡಿವಿಷನ್‌ ಹಾಕಿ ಲೀಗ್‌: ಯಂಗ್‌ಸ್ಟಾರ್‌ಗೆ ಜಯ

Last Updated 24 ಜನವರಿ 2023, 18:40 IST
ಅಕ್ಷರ ಗಾತ್ರ

ಬೆಂಗಳೂರು: ರಾಯಚೂರಿನ ಯಂಗ್‌ ಸ್ಟಾರ್‌ ಹಾಕಿ ಕ್ಲಬ್‌ ತಂಡದವರು ಕೆಎಸ್‌ಎಚ್‌ಎ ‘ಎ’ ಡಿವಿಷನ್‌ ಹಾಕಿ ಲೀಗ್‌ನಲ್ಲಿ ಗೆಲುವು ಪಡೆದರು.

ಮಂಗಳವಾರ ನಡೆದ ಪಂದ್ಯದಲ್ಲಿ ಯಂಗ್‌ ಸ್ಟಾರ್‌ ತಂಡ 5–2 ಗೋಲುಗಳಿಂದ ಧಾರವಾಡದ ಓಂ ಸಾಯಿ ಹಾಕಿ ಕ್ಲಬ್‌ ತಂಡವನ್ನು ಮಣಿಸಿತು. ಶ್ರೀಕಾಂತ್‌ (33), ತಾಲಿಬ್‌ (35), ಬಾಬು (39), ವಿನಯ್‌ (42) ಮತ್ತು ಅಂಕಿತ್‌ (6) ಅವರು ವಿಜಯಿ ತಂಡದ ಪರ ಗೋಲು ಗಳಿಸಿದರು.

ಓಂ ಸಾಯಿ ತಂಡಕ್ಕೆ ಮನು (17) ಮತ್ತು ಸಬ್ರಿತ್‌ (31) ಅವರು ಚೆಂಡನ್ನು ಗುರಿ ಸೇರಿಸಿದರು.

ಬುಧವಾರ ನಡೆಯುವ ಪಂದ್ಯಗಳಲ್ಲಿ ಬೆಂಗಳೂರು ಯುನೈಟೆಡ್‌ ಹಾಕಿ ಕ್ಲಬ್‌– ಯಂಗ್‌ ಸ್ಟಾರ್‌ ಹಾಕಿ ಕ್ಲಬ್‌ ಹಾಗೂ ಗುರು ಹಾಕಿ ಕ್ಲಬ್– ಕೆಎಫ್‌ಎಸ್‌ಬಿಎಸ್‌ ತಂಡಗಳು ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT