ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ನೆಲ್ಲಮಕ್ಕಡಕ್ಕೆ ಭರ್ಜರಿ ಜಯ

Last Updated 26 ಏಪ್ರಿಲ್ 2019, 20:22 IST
ಅಕ್ಷರ ಗಾತ್ರ

ಮಡಿಕೇರಿ: ನೆಲ್ಲಮಕ್ಕಡ ತಂಡವು ಕೊಡವ ಕೌಟುಂಬಿಕ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗೆಲುವು ಪಡೆದು ಮುಂದಿನ ಸುತ್ತಿಗೆ ಪ್ರವೇಶಿಸಿತು.

ಕಾಕೋಟುಪರಂಬು ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನೆಲ್ಲಮಕ್ಕಡ ತಂಡ 4-0 ಗೋಲುಗಳಿಂದ ನೆರ್ಪಂಡ ತಂಡವನ್ನು ಸೋಲಿಸಿತು. ನೆಲ್ಲಮಕ್ಕಡ ಪರವಾಗಿ ಸೋಮಣ್ಣ ನಾಲ್ಕು ಗೋಲುಗಳನ್ನು ಗಳಿಸಿ ಜಯದ ರೂವಾರಿ ಎನಿಸಿಕೊಂಡರು.

ಕಂಬೇಯಂಡ ತಂಡ 1-0 ಗೋಲಿನಿಂದ ಚೆಯ್ಯಂಡ ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ ಕಾರ್ಯಪ್ಪ ಗೋಲು ತಂದಿತ್ತರು.

ಇತರ ಪಂದ್ಯಗಳಲ್ಲಿ ಕೊಂಡಿರ ತಂಡ 1–0 ರಲ್ಲಿ ಐಚೆಟ್ಟಿರ ವಿರುದ್ಧ; ಚೆಕ್ಕೆರ ತಂಡ 2–0 ರಲ್ಲಿ ಮುಕ್ಕಾಟಿರ ವಿರುದ್ಧ; ಇಟ್ಟಿರ 5–3 ರಲ್ಲಿ ಪೊನ್ನಚೆಟ್ಟಿರ ವಿರುದ್ಧ; ಚೋಯಮಾಡಂಡ 2–1 ರಲ್ಲಿ ಕಂಗಾಂಡ ತಂಡದ ವಿರುದ್ಧ ಜಯಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT