ಭಾರತಕ್ಕೆ ಗೆಲುವು

ಭಾನುವಾರ, ಜೂನ್ 16, 2019
32 °C
ನಾಲ್ಕು ರಾಷ್ಟ್ರಗಳ 21 ವಯಸ್ಸಿನೊಳಗಿನ ಮಹಿಳೆಯರ ಅಂತರರಾಷ್ಟ್ರೀಯ ಹಾಕಿ ಟೂರ್ನಿ

ಭಾರತಕ್ಕೆ ಗೆಲುವು

Published:
Updated:

ಡಬ್ಲಿನ್‌ (ಪಿಟಿಐ): ಒಂದು ಗೋಲಿನ ಹಿನ್ನಡೆಯಿಂದ ಪುಟಿದೆದ್ದ ಭಾರತ ಮಹಿಳಾ ಹಾಕಿ ತಂಡ ಐರ್ಲೆಂಡ್‌ ವಿರುದ್ಧ 2–1ರಿಂದ ಜಯಿಸಿತು.

ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ 21 ವಯಸ್ಸಿನೊಳಗಿನವರ ಕ್ಯಾಂಟರ್‌ ಫಿಜ್‌ಗೆರಾಲ್ಡ್‌ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

ಐರ್ಲೆಂಡ್‌ ಪರ 10ನೇ ನಿಮಿಷದಲ್ಲಿಯೇ ಲಾರಾ ಫಾಲಿ ಗೋಲು ಬಾರಿಸಿ ಮುನ್ನಡೆಗೆ ಕಾರಣವಾದರು. ಮೂರು ಹಾಗೂ ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದ ರೀಟ್‌ (35ನೇ ನಿಮಿಷ) ಹಾಗೂ ಶರ್ಮಿಳಾ ದೇವಿ (53ನೇ ನಿಮಿಷ) ಪಾರಮ್ಯ ಮೆರೆದರು.

ಆರಂಭದ ಎರಡು ಕ್ವಾರ್ಟರ್‌ಗಳಲ್ಲಿ ಯಾವುದೇ ಮೋಡಿ ಮಾಡದ ಭಾರತ, ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ರೀಟ್‌ ಗಳಿಸಿದ ಗೋಲಿನ ಮೂಲಕ ಸಮಬಲ ಸಾಧಿಸಿತು. ಆ ಬಳಿಕ ಉಭಯ ತಂಡಗಳು ನಾಲ್ಕನೇ ಕ್ವಾರ್ಟರ್‌ನಲ್ಲಿ ಬಿರುಸಿನ ಆಟಕ್ಕಿಳಿದವು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !