ಮಂಗಳವಾರ, ಫೆಬ್ರವರಿ 18, 2020
30 °C

ಚೆಸ್‌: ಕೊನೆರು ಹಂಪಿಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೇಂಟ್‌ ಲೂಯಿಸ್‌, ಅಮೆರಿಕ: ಭಾರತದ ಕೊನೆರು ಹಂಪಿ ಅವರು ಕೈರನ್ಸ್‌ ಕಪ್‌ ಚೆಸ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

ಗುರುವಾರ ರಾತ್ರಿ ನಡೆದ ಆರನೇ ಸುತ್ತಿನ ಪೈಪೋಟಿಯಲ್ಲಿ ಹಂಪಿ ಅವರು ರಷ್ಯಾದ ಅಲೆಕ್ಸಾಂಡ್ರಾ ಕೊಸ್ತೆನಿಯುಕ್‌ ಅವರನ್ನು ಪರಾಭವಗೊಳಿಸಿದರು. ಪಂದ್ಯದುದ್ದಕ್ಕೂ ಜಾಣ್ಮೆಯಿಂದ ಕಾಯಿಗಳನ್ನು ಚಲಾಯಿಸಿದ ಹಂಪಿ ಅವರು 61ನೇ ನಡೆಯಲ್ಲಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು ನಾಲ್ಕಕ್ಕೆ ಹೆಚ್ಚಿಸಿಕೊಂಡಿರುವ ಹಂಪಿ, ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ.

ಆರನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಭಾರತದ ದ್ರೋಣವಳ್ಳಿ ಹರಿಕಾ ಅವರು ಚೀನಾದ ವೆನ್‌ಜುನ್‌ ಜು ವಿರುದ್ಧ ಡ್ರಾ ಮಾಡಿಕೊಂಡರು. ಈ ಮೂಲಕ ಒಟ್ಟು ಪಾಯಿಂಟ್ಸ್‌ ಅನ್ನು ಮೂರಕ್ಕೆ ಹೆಚ್ಚಿಸಿಕೊಂಡು ಜಂಟಿ ಮೂರನೇ ಸ್ಥಾನ ಪಡೆದರು.

ಅಮೆರಿಕದ ಕ್ಯಾರಿಸ್ಸಾ ಯಿಪ್‌ ಅವರು ಸತತ ಎರಡನೇ ಪಂದ್ಯದಲ್ಲಿ ಗೆದ್ದರು. ಆರನೇ ಸುತ್ತಿನಲ್ಲಿ ಅವರು ರಷ್ಯಾದ ವ್ಯಾಲೆಂಟಿನಾ ಗುನಿನಾ ಅವರನ್ನು ಸೋಲಿಸಿದರು.

ಏಳನೇ ಸುತ್ತಿನಲ್ಲಿ ಹರಿಕಾ ಮತ್ತು ಯಿಪ್‌ ಎದುರಾಗಲಿದ್ದಾರೆ. ಹಂಪಿ ಅವರಿಗೆ ಅಮೆರಿಕದ ಇರಿನಾ ಖ್ರುಷ್‌ ಸವಾಲು ಎದುರಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು