ಸ್ವಿಟ್ಜರ್ಲೆಂಡ್ ನ್ಯಾಯಾಲಯದ ತೀರ್ಪು ವಿರುದ್ಧ ಹೋರಾಟ: ಐಎಎಎಫ್‌

ಬುಧವಾರ, ಜೂನ್ 19, 2019
23 °C

ಸ್ವಿಟ್ಜರ್ಲೆಂಡ್ ನ್ಯಾಯಾಲಯದ ತೀರ್ಪು ವಿರುದ್ಧ ಹೋರಾಟ: ಐಎಎಎಫ್‌

Published:
Updated:

ಪ್ಯಾರಿಸ್ (ಎಎಫ್‌ಪಿ): ಪುರುಷ ಹಾರ್ಮೋನ್ ಪ್ರಮಾಣ ಹೆಚ್ಚು ಇರುವ ಮಹಿಳಾ ಅಥ್ಲೀಟ್‌ಗಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಸ್ವಿಟ್ಜರ್ಲೆಂಡ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೋರಾಡಲಾಗುವುದು ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ತಿಳಿಸಿದೆ.

ದಕ್ಷಿಣ ಆಫ್ರಿಕಾದ ಕಾಸ್ಟರ್ ಸೆಮೆನ್ಯಾ ಒಳಗೊಂಡಂತೆ ಕೆಲವು ಮಹಿಳಾ ಅಥ್ಲೀಟ್‌ಗಳು 800 ಮೀಟರ್ಸ್ ಓಟದಲ್ಲಿ ಪಾಲ್ಗೊಳ್ಳದಂತೆ ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ತಡೆಯೊಡ್ಡಿತ್ತು. ಇದನ್ನು ಸೆಮೆನ್ಯಾ  ಸ್ವಿಟ್ಜರ್ಲೆಂಡ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಸೋಮವಾರ ಈ ಕುರಿತು ನ್ಯಾಯಾಲಯ ತೀರ್ಪು ನೀಡಿತ್ತು.

‘ಸಮಾನ ಹಕ್ಕುಗಳಿಗಾಗಿ ಫೆಡರೇಷನ್ ನಿರಂತರ ಹೋರಾಟ ನಡೆಸಲಿದೆ. ತೀರ್ಪು ಮರುಪರಿಶೀಲನೆ ಆಗುವವರೆಗೂ ಇದು ಮುಂದುವರಿಯಲಿದೆ’ ಎಂದು ಪದಾಧಿಕಾರಿಗಳು ತಿಳಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !