ಮುಂಬೈಗೆ ಮತ್ತೊಂದು ಗೆಲುವು

ಗುರುವಾರ , ಜೂನ್ 20, 2019
28 °C
ಐಐಪಿ ಕಬಡ್ಡಿ ಲೀಗ್‌: ಪಾಂಡಿಚೇರಿ ಪ್ರಿಡೇಟರ್ಸ್‌ಗೆ ನಿರಾಸೆ

ಮುಂಬೈಗೆ ಮತ್ತೊಂದು ಗೆಲುವು

Published:
Updated:
Prajavani

ಮೈಸೂರು: ಆಟದ ಎಲ್ಲಾ ವಿಭಾಗಗಳಲ್ಲಿ ಮಿಂಚಿದ ಮುಂಬೈ ಚೆ ರಾಜೆ ತಂಡ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನಲ್ಲಿ (ಐಐಪಿಕೆಎಲ್‌) ಗೆಲುವಿನ ಓಟ ಮುಂದುವರಿಸಿದೆ.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯ ದಲ್ಲಿ ಮುಂಬೈ ತಂಡ 33–30 ರಲ್ಲಿ ಪಾಂಡಿಚೇರಿ ಪ್ರಿಡೇಟರ್ಸ್‌ ತಂಡವನ್ನು ಮಣಿಸಿತು.

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಮಾತ್ರ ಸಮಬಲದ ಪೈಪೋಟಿ ಕಂಡುಬಂತು. ಆ ಬಳಿಕ ಮುಂಬೈ ಪೂರ್ಣ ಪ್ರಭುತ್ವ ಸಾಧಿಸಿತು. ಮೊದಲ ಕ್ವಾರ್ಟರ್‌ ಕೊನೆಗೊಂಡಾಗ ಎರಡೂ ತಂಡಗಳು 6–6 ರಲ್ಲಿ ಸಮಬಲ ಸಾಧಿಸಿದ್ದವು.

ಎರಡನೇ ಕ್ವಾರ್ಟರ್‌ನಲ್ಲಿ ಚುರುಕಿನ ಆಟವಾಡಿದ ಮುಂಬೈ ಸತತ ಎಂಟು ಪಾಯಿಂಟ್‌ ಕಲೆಹಾಕಿ 14–6 ರಲ್ಲಿ ಮುನ್ನಡೆ ಸಾಧಿಸಿತು. ಮರುಹೋರಾಟ ನಡೆಸಿದ ಪ್ರಿಡೇಟರ್ಸ್‌ ಹಿನ್ನಡೆಯನ್ನು 10–14ಕ್ಕೆ ತಗ್ಗಿಸಿತು. ವಿರಾಮದ ವೇಳೆಗೆ ಮುಂಬೈ ನಾಲ್ಕು ಪಾಯಿಂಟ್‌ಗಳ (16–12) ಮುನ್ನಡೆ ಸಾಧಿಸಿತ್ತು.

ಎರಡನೇ ಅವಧಿಯಲ್ಲೂ ರೇಡಿಂಗ್‌ ಮತ್ತು ಟ್ಯಾಕ್ಲಿಂಗ್‌ನಲ್ಲಿ ಮಿಂಚಿದ ಮುಂಬೈ ಗೆಲುವು ಒಲಿಸಿಕೊಂಡಿತು. ಮಣಿವೀರ ಕಾಂತ (8 ಪಾಯಿಂಟ್) ಮತ್ತು ಮಹೇಶ್‌ ಮಗ್ದುಮ್‌ (6 ಪಾಯಿಂಟ್) ಅವರು ತಂಡದ ಜಯ ದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಿಡೇ ಟರ್ಸ್‌ ತಂಡದ ನಾಯಕ ಸುರೇಶ್‌ ಕುಮಾರ್‌ (10 ಪಾಯಿಂಟ್) ಅವರ ಹೋರಾಟ ವ್ಯರ್ಥವಾಯಿತು.

ದಿಲ್ಲಿ ಗೆಲುವಿನ ಓಟ: ಟೂರ್ನಿಯಲ್ಲಿ ದಿಲೇರ್‌ ದಿಲ್ಲಿ ತಂಡದ ಗೆಲುವಿನ ಓಟ ಮುಂದುವರಿದಿದೆ. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ದಿಲ್ಲಿ ತಂಡ 40–35 ರಲ್ಲಿ ಹರಿಯಾಣ ಹೀರೋಸ್‌ ತಂಡವನ್ನು ಮಣಿಸಿತು. ದಿಲ್ಲಿ ತಂಡ 13 ಪಾಯಿಂಟ್‌ಗಳೊಂದಿಗೆ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ.

ಶನಿವಾರದ ಕೊನೆಯ ಪಂದ್ಯ ದಲ್ಲಿ ಪುಣೆ ಪ್ರೈಡ್ 42–28 ರಲ್ಲಿ ತೆಲುಗು ಬುಲ್ಸ್‌ ವಿರುದ್ಧ ಜಯ ಸಾಧಿ ಸಿತು. ರೇಡಿಂಗ್‌ನಲ್ಲಿ 15 ಮತ್ತು ಟ್ಯಾಕಲ್‌ನಲ್ಲಿ ಒಂದು ಪಾಯಿಂಟ್‌ ತಂದಿತ್ತ ಅಮರ್‌ಜೀತ್‌ ಸಿಂಗ್‌ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಏಳು ಪಂದ್ಯಗಳಿಂದ 12 ಪಾಯಿಂಟ್‌ ಸಂಗ್ರಹಿಸಿರುವ ಪುಣೆ ತಂಡ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು: ರಾತ್ರಿ 8ಕ್ಕೆ: ಹರಿಯಾಣ ಹೀರೋಸ್– ತೆಲುಗು ಬುಲ್ಸ್; 9ಕ್ಕೆ: ಬೆಂಗಳೂರು ರಿನೋಸ್– ದಿಲೇರ್‌ ದಿಲ್ಲಿ; 10ಕ್ಕೆ: ಪುಣೆ ಪ್ರೈಡ್– ಮುಂಬೈ ಚೆ ರಾಜೆ

ನೇರ ಪ್ರಸಾರ: ಡಿ ಸ್ಪೋರ್ಟ್ಸ್‌, ಡಿಡಿ ಸ್ಪೋರ್ಟ್ಸ್‌, ಎಂಟಿವಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !