ಬ್ಯಾಸ್ಕೆಟ್‌ಬಾಲ್: ಡ್ರಿಬ್ಲರ್ಸ್‌ಗೆ ಜಯ
ಬೆಂಗಳೂರು: ಡೆಲ್ಲಿ ಡ್ರಿಬ್ಲರ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಐಎನ್‌ಬಿಎಲ್ ಬ್ಯಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಶುಭಾರಂಭ ಮಾಡಿದರು.
ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಡ್ರಿಬ್ಲರ್ಸ್ 84–78 ರಲ್ಲಿ ಕೊಚ್ಚಿ ಟೈಗರ್ಸ್ ತಂಡವನ್ನು ಮಣಿಸಿತು. ಲೋಕೇಂದ್ರ ಸಿಂಗ್ (20) ಮತ್ತು ಪ್ರಶಾಂತ್ ಸಿಂಗ್ (16) ಅವರು ದೆಹಲಿಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊಚ್ಚಿ ಪರ ಲಾಲ್ರಿನಾ 28 ಪಾಯಿಂಟ್ಸ್ ತಂದಿತ್ತರು.
ಇನ್ನೊಂದು ಪಂದ್ಯದಲ್ಲಿ ಮುಂಬೈ ಟೈಟನ್ಸ್ 79–71 ರಲ್ಲಿ ಚಂಡೀಗಢ ವಾರಿಯರ್ಸ್ ವಿರುದ್ಧ ಗೆದ್ದಿತು. ವಿಜೇತ ತಂಡದ ಸಹಜ್ ಪಟೇಲ್ 22, ಸೈಯದ್ ಮೊಹಮ್ಮದ್ 19 ಪಾಯಿಂಟ್ಸ್ ಗಳಿಸಿದರು.
ಶುಕ್ರವಾರ ನಡೆಯುವ ಪಂದ್ಯಗಳಲ್ಲಿ ಚೆನ್ನೈ ಹೀಟ್– ಡೆಲ್ಲಿ ಡ್ರಿಬ್ಲರ್ಸ್, ಮುಂಬೈ ಟೈಟನ್ಸ್– ಬೆಂಗಳೂರು ಕಿಂಗ್ಸ್ ತಂಡಗಳು ಪೈಪೋಟಿ ನಡೆಸಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.