ಶನಿವಾರ, ಮೇ 28, 2022
21 °C

ಏಷ್ಯಾಕಪ್ ಹಾಕಿ: ಗುರ್ಜಿತ್ ಕೌರ್ ಹ್ಯಾಟ್ರಿಕ್‌, ಸೆಮಿಗೆ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಸ್ಕತ್‌: ಗುರ್ಜಿತ್ ಕೌರ್‌ ಗಳಿಸಿದ ಹ್ಯಾಟ್ರಿಕ್‌, ಮೋನಿಕಾ ಮತ್ತು ಜ್ಯೋತಿ ಗಳಿಸಿದ ತಲಾ ಎರಡು ಗೋಲುಗಳ ಬಲದಿಂದ ಭಾರತ ತಂಡವು ಏಷ್ಯಾಕಪ್ ಮಹಿಳಾ ಹಾಕಿ ಟೂರ್ನಿಯಲ್ಲಿ ಸಿಂಗಪುರದ ವಿರುದ್ಧ ಭರ್ಜರಿ ಜಯ ಗಳಿಸಿತು. ಇದರೊಂಂದಿಗೆ ಸೆಮಿಫೈನಲ್‌ಗೂ ತಲುಪಿತು.

ಸೋಮವಾರ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ಭಾರತದ ಆಟಗಾರ್ತಿಯರು 9–1ರಿಂದ ಎದುರಾಳಿ ತಂಡಕ್ಕೆ ಸೋಲುಣಿಸಿದರು.

ಗುರ್ಜಿತ್ 8, 37 ಮತ್ತು 48ನೇ ನಿಮಿಷಗಳಲ್ಲಿ ಕೈಚಳಕ ತೋರಿದರೆ, ಮೋನಿಕಾ (6 ಮತ್ತು 7ನೇ ನಿ.), ಜ್ಯೋತಿ (43, 58ನೇ ನಿ.) ಮಿಂಚಿದರು. ವಂದನಾ ಕಟಾರಿಯಾ (8ನೇ ನಿ.) ಮತ್ತು ಮರಿಯಾನ ಕುಜುರ್‌ (10ನೇ ನಿ.) ತಂಡದ ಪರ ತಲಾ ಒಂದು ಗೋಲು ಹೊಡೆದರು. 43ನೇ ನಿಮಿಷದಲ್ಲಿ ಸಿಂಗಪುರದ ತೊಹ್‌ ಲಿನ್ ಮಿನ್‌ ಅವರು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ತಂಡದ ಏಕೈಕ ಗೋಲು ಹೊಡೆದರು.

ಬುಧವಾರ ನಡೆಯುವ ನಾಲ್ಕರ ಘಟ್ಟದಲ್ಲಿ ಭಾರತ ತಂಡವು ಕೊರಿಯಾ ಸವಾಲು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ಮಲೇಷ್ಯಾ ತಂಡವು ಚೀನಾವನ್ನು ಎದುರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು