ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಕಪ್ ಹಾಕಿ: ಫೈನಲ್‌ ಮೇಲೆ ಭಾರತದ ಕಣ್ಣು

ದಕ್ಷಿಣ ಕೊರಿಯಾ ತಂಡದ ಸವಾಲು
Last Updated 30 ಮೇ 2022, 14:17 IST
ಅಕ್ಷರ ಗಾತ್ರ

ಜಕಾರ್ತ, ಇಂಡೊನೇಷ್ಯಾ: ಏಷ್ಯಾಕಪ್ ಟೂರ್ನಿಯ ಫೈನಲ್ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್‌ ಭಾರತ ತಂಡವು ಟೂರ್ನಿಯ ರೌಂಡ್‌ ರಾಬಿನ್ ಅಂತಿಮ ಲೀಗ್ ಪಂದ್ಯ‌ದಲ್ಲಿಮಂಗಳವಾರ ದಕ್ಷಿಣ ಕೊರಿಯಾ ಸವಾಲು ಎದುರಿಸಲಿದೆ.

ಸೋಮವಾರ ನಡೆದ ಸೂಪರ್‌ 4ರ ಹಂತದ ಎರಡನೇ ಪಂದ್ಯದಲ್ಲಿ ಬೀರೇಂದ್ರ ಲಾಕ್ರಾ ನಾಯಕತ್ವದಭಾರತ, ಮಲೇಷ್ಯಾ ಎದುರು 3–3 ಡ್ರಾ ಸಾಧಿಸಿತ್ತು. ಈ ಹಣಾಹಣಿಯಲ್ಲಿ ಜಯಿಸಿದ್ದರೆ ತಂಡದ ಫೈನಲ್‌ ಪ್ರವೇಶ ಖಚಿತವಾಗುತ್ತಿತ್ತು.

ಶನಿವಾರ ಜಪಾನ್ ತಂಡಕ್ಕೆ ಭಾರತ ಸೋಲುಣಿಸಿತ್ತು. ಸದ್ಯದ ಸೂಪ‍ರ್ 4 ಪಟ್ಟಿಯ ಪ್ರಕಾರ ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿದೆ.ಈ ತಂಡಕ್ಕಿಂತ ಒಂದು ಗೋಲು ಕಡಿಮೆ ದಾಖಲಿಸಿರುವ ಭಾರತ ಎರಡನೇ ಸ್ಥಾನದಲ್ಲಿದೆ.

ಎರಡು ಸೋಲು ಕಂಡಿರುವ ಜಪಾನ್‌ ಬಹುತೇಕ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ ಎರಡು ಗೋಲುಗಳ ಅಂತರದಿಂದ ಜಪಾನ್‌ಅನ್ನು ಮಣಿಸಿದರೆಮಲೇಷ್ಯಾಕ್ಕೆ ಫೈನಲ್‌ಗೇರುವ ಅವಕಾಶವಿದೆ. ಅಷ್ಟೇ ಸಾಲದು; ದಕ್ಷಿಣ ಕೊರಿಯಾ– ಭಾರತ ನಡುವಣ ಪಂದ್ಯ ಡ್ರಾ ಆಗಬೇಕು.

ಕೊರಿಯಾ ತಂಡವು ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ 2–2ರಿಂದ ಮಲೇಷ್ಯಾದೊಂದಿಗೆ ಡ್ರಾ ಸಾಧಿಸಿತ್ತು. ಇನ್ನೊಂದು ಹಣಾಹಣಿಯಲ್ಲಿ 3–1ರಿಂದ ಜಪಾನ್ ತಂಡಕ್ಕೆ ಸೋಲುಣಿಸಿತ್ತು.

ಭಾರತ ತಂಡದ ಫಾರ್ವರ್ಡ್‌ ವಿಭಾಗದಲ್ಲಿರುವ ಉತ್ತಮ್ ಸಿಂಗ್‌, ಕನ್ನಡಿಗ ಎಸ್‌.ವಿ.ಸುನೀಲ್ ಮತ್ತು ಪವನ್‌ ರಾಜಭರ್‌ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ಎದುರಾಳಿಗೆ ಅನವಶ್ಯಕ ಪೆನಾಲ್ಟಿ ಕಾರ್ನರ್ ನೀಡುವುದನ್ನು ತಂಡವು ತಪ್ಪಿಸಬೇಕಿದೆ.

ಸೂಪರ್‌ 4 ಹಂತದ ಇಂದಿನ ಪಂದ್ಯಗಳು
ಜಪಾನ್– ಮಲೇಷ್ಯಾ (
ಮಧ್ಯಾಹ್ನ 2.30)
ಭಾರತ– ದಕ್ಷಿಣ ಕೊರಿಯಾ (ಸಂಜೆ 5 ಗಂಟೆ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT