ಬುಧವಾರ, ನವೆಂಬರ್ 20, 2019
20 °C
ಏಷ್ಯನ್‌ ಜೂನಿಯರ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌

21 ಪದಕ ಬಾಚಿದ ಭಾರತ

Published:
Updated:

ನವದೆಹಲಿ: ಭಾರತದ ಬಾಕ್ಸರ್‌ಗಳು ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕಗಳ ಬೇಟೆಯಾಡಿದ್ದಾರೆ. ಆರು ಚಿನ್ನ, ಒಂಬತ್ತು ಬೆಳ್ಳಿ ಸೇರಿದಂತೆ ಒಟ್ಟು 21 ಪದಕಗಳು ಒಲಿದಿವೆ.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಫುಜೈರಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ 26 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಒಟ್ಟಾರೆ ಪದಕ ಗಳಿಕೆಯಲ್ಲಿ ಭಾರತ ಮೊದಲ ಸ್ಥಾನ ಪಡೆದರೂ, ಹೆಚ್ಚು ಚಿನ್ನ ಗಳಿಸಿದ ಉಜ್ಬೆಕಿಸ್ತಾನಕ್ಕಿಂತ(20) ಒಂದು ಸ್ಥಾನ ಹಿಂದೆ ಬಿದ್ದಿತು. ಭಾರತದ ಸ್ಪರ್ಧಿಗಳು ಆರು ಸ್ವರ್ಣ ಪದಕಗಳನ್ನು ತಮ್ಮದಾಗಿಸಿಕೊಂಡರು.

ಪುರುಷರ ತಂಡ ಎರಡು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗಳಿಸಿತು. ಮಹಿಳಾ ಸ್ಪರ್ಧಿಗಳು ನಾಲ್ಕು ಚಿನ್ನ, ಆರು ಬೆಳ್ಳಿ ಹಾಗೂ ಮೂರು ಕಂಚು ಗೆದ್ದರು.

ಪುರುಷರ ವಿಭಾಗದಲ್ಲಿ ಪದಕ ವಿಜೇತರು: ಚಿನ್ನ: ವಿಶ್ವನಾಥ ಸುರೇಶ್‌ (46 ಕೆಜಿ ವಿಭಾಗ) ಹಾಗೂ ವಿಶ್ವಾಮಿತ್ರ ಚಾಂಗ್‌ಥಮ್‌ (48 ಕೆಜಿ).

ಬೆಳ್ಳಿ: ಯೋಗೇಶ್‌ ಕಾಗ್ರಾ (63 ಕೆಜಿ), ಜಯದೀಪ್‌ ರಾವತ್‌ (66 ಕೆಜಿ) ಹಾಗೂ ರಾಹುಲ್‌ (70 ಕೆಜಿ). ಕಂಚು: ವಿಜಯ್‌ ಸಿಂಗ್‌ (50 ಕೆಜಿ), ವಿಕ್ಟರ್‌ ಸಿಂಗ್‌ ಸೈಕೋಮ್‌ (52 ಕೆಜಿ), ವಂಶಜ್‌ (60 ಕೆಜಿ).

ಮಹಿಳೆಯರು: ಚಿನ್ನ: ಕಲ್ಪನಾ (46 ಕೆಜಿ), ಪ್ರೀತಿ ದಹಿಯಾ (60 ಕೆಜಿ) ತಸ್ವೀರ್‌ ಕೌರ್‌ ಸಂಧು (80 ಕೆಜಿ) ಮತ್ತು ಅಲ್ಫಿಯಾ ತರನ್ನುಂ ಪಠಾಣ್‌ (+80ಕೆಜಿ). ಬೆಳ್ಳಿ: ತಮನ್ನಾ (48 ಕೆಜಿ), ತನ್ನು (52 ಕೆಜಿ), ನೇಹಾ (54 ಕೆಜಿ), ಖುಷಿ (63 ಕೆಜಿ), ಶಾರ್ವರಿ ಕಲ್ಯಾಣಕರ್‌ (70 ಕೆಜಿ) ಮತ್ತು ಖುಷಿ (75 ಕೆಜಿ).

ಕಂಚು: ರಿಂಕು (50 ಕೆಜಿ), ಅಂಬೆಶೋರಿ ದೇವಿ (57 ಕೆಜಿ) ಮತ್ತು ಮಹಿ ಲಾಮಾ.

ಪ್ರತಿಕ್ರಿಯಿಸಿ (+)