ಸೋಮವಾರ, ಅಕ್ಟೋಬರ್ 21, 2019
22 °C

ಒಲಿಂಪಿಕ್ಸ್‌ನಲ್ಲಿ ಭಾರತದ ಅತಿಥಿ ಕೇಂದ್ರ

Published:
Updated:

ನವದೆಹಲಿ: ಟೋಕಿಯೊದಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತ ಅತಿಥಿ ಕೇಂದ್ರವನ್ನು ಸ್ಥಾಪಿಸಲಿದೆ. ಇದೇ ಮೊದಲ ಬಾರಿ ಭಾರತ ಈ ಪ್ರಯತ್ನಕ್ಕೆ ಮುಂದಾಗಿದೆ. ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮತ್ತು ಜೆಎಸ್‌ಡಬ್ಲ್ಯು ಜಂಟಿಯಾಗಿ ಇದರ ಜವಾಬ್ದಾರಿ ಹೊತ್ತುಕೊಂಡಿದೆ.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅನೇಕ ರಾಷ್ಟ್ರಗಳು ತಮ್ಮದೇ ಆತಿಥ್ಯ ಕೇಂದ್ರವನ್ನು ಒಳಗೊಂಡಿರುತ್ತವೆ. ಭಾರತ ಸ್ಥಾಪಿಸಲಿರುವ ಕೇಂದ್ರದ ಲಾಂಛನವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಗುರುವಾರ ಬಿಡುಗಡೆ ಮಾಡಿದರು. 

‘ಇಂಡಿಯಾ ಹೌಸ್ ಸ್ಥಾಪಿಸಲು ಮುಂದಾಗಿರುವುದು ಅಭಿನಂದನೀಯ. ಕ್ರೀಡಾ ಚಾಂಪಿಯನ್‌ಗಳನ್ನು ಬೆಳಕಿಗೆ ತರಬೇಕಾದರೆ ನಮಗೆ ನಮ್ಮದೇ ಆದ ನೆರವು ತಂಡದ ಅಗತ್ಯವಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳಿಗೆ ಇಂಡಿಯಾ ಹೌಸ್ ಅನೇಕ ರೀತಿಯಲ್ಲಿ ಉಪಕಾರಿಯಾಗಲಿದೆ’ ಎಂದು ಕಿರಣ್ ರಿಜುಜು ಅಭಿಪ್ರಾಯಪಟ್ಟರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)