ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲ್ತಾನ್‌ ಜೊಹರ್‌ ಕಪ್‌ ಹಾಕಿ: ಭಾರತಕ್ಕೆ ನಿರಾಸೆ

Last Updated 23 ಅಕ್ಟೋಬರ್ 2022, 14:35 IST
ಅಕ್ಷರ ಗಾತ್ರ

ಜೊಹರ್, ಮಲೇಷ್ಯಾ: ಭಾರತ ಜೂನಿಯರ್‌ ಪುರುಷರ ತಂಡ ಸುಲ್ತಾನ್‌ ಜೊಹರ್‌ ಕಪ್‌ ಹಾಕಿ ಟೂರ್ನಿಯಲ್ಲಿ 4–5 ಗೋಲುಗಳಿಂದ ದಕ್ಷಿಣ ಆಫ್ರಿಕಾ ಎದುರು ಸೋತಿತು.

ಭಾನುವಾರ ನಡೆದ ಪಂದ್ಯದ ಒಂದು ಹಂತದಲ್ಲಿ ಎರಡು ಗೋಲುಗಳ ಮುನ್ನಡೆಯಲ್ಲಿದ್ದ ಭಾರತ, ಆ ಬಳಿಕ ಆಟದ ಮೇಲಿನ ಹಿಡಿತ ಕೈಬಿಟ್ಟಿತು.

ಮರ್ವಿನ್ ಸಿಮೊನ್ಸ್ (7ನೇ ನಿ.), ಫವಾಜ್‌ ಖಾದರ್ (34), ಸೆಂಜ್‌ವೆಸ್ಲಿ ಎಂಗುಬನೆ (35) ಮತ್ತು ಕ್ಯಾಮರಾನ್ ಲಿ ಫೋರೆಸ್ಟಿಯರ್ (49 ಮತ್ತು 57ನೇ ನಿ.) ಅವರು ದಕ್ಷಿಣ ಆಫ್ರಿಕಾ ಪರ ಗೋಲು ಗಳಿಸಿದರು.

ಭಾರತ ತಂಡಕ್ಕೆ ಶರ್ದಾ ನಂದ ತಿವಾರಿ (9 ಮತ್ತು 10ನೇ ನಿ.), ನಾಯಕ ಉತ್ತಮ್‌ ಸಿಂಗ್ (17) ಮತ್ತು ಸುದೀಪ್ ಚಿರ್ಮಾಕೊ (45) ಅವರು ಗೋಲು ತಂದಿತ್ತರು.

ಭಾರತ ತನ್ನ ಮೂರನೇ ಪಂದ್ಯದಲ್ಲಿ ಅ.25 ರಂದು ಜಪಾನ್ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT