ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಎಫ್‌ಐಎಚ್‌ ಪ್ರೊ ಲೀಗ್‌ ವೇಳಾಪಟ್ಟಿ: ಭಾರತಕ್ಕೆ ನೆದರ್ಲೆಂಡ್ಸ್ ಮೊದಲ ಎದುರಾಳಿ

Published:
Updated:
Prajavani

ನವದೆಹಲಿ: ಭಾರತ ಹಾಕಿ ತಂಡ ಎಫ್‌ಐಎಚ್‌ ಪ್ರೊ ಲೀಗ್‌ನ ಎರಡನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಸವಾಲನ್ನು ತವರಿನಲ್ಲಿ ಎದುರಿಸಲಿದೆ. ಮುಂದಿನ ವರ್ಷದ ಜನವರಿಯಲ್ಲಿ ಲೀಗ್‌ ಆರಂಭವಾಗಲಿದೆ.

ಎರಡನೇ ಆವೃತ್ತಿಯ ಎಫ್‌ಐಎಚ್‌ ಪ್ರೊ ಲೀಗ್‌ ವೇಳಾಪಟ್ಟಿ ಬುಧವಾರ ಬಿಡುಗಡೆಯಾಗಿದೆ. ಮೊದಲ ಲೀಗ್‌ನಿಂದ ಹಿಂದೆ ಭಾರತ ಹಿಂದೆ ಸರಿದಿತ್ತು. ಜನವರಿ 18, 19ರಂದು ನೆದರ್ಲೆಂಡ್ಸ್ ವಿರುದ್ಧ ತಂಡ ಕಣಕ್ಕಿಳಿಯಲಿದೆ.

ಭಾರತ ತಂಡ ವಿಶ್ವ ಚಾಂಪಿಯನ್‌ ಬೆಲ್ಜಿಯಂ ತಂಡವನ್ನು ಫೆಬ್ರವರಿ 8 ಹಾಗೂ 9ರಂದು ಹಾಗೂ ಆಸ್ಟ್ರೇಲಿಯಾ ತಂಡವನ್ನು ಫೆಬ್ರವರಿ 22 ಹಾಗೂ 23ರಂದು ತವರಿನ ನೆಲದಲ್ಲಿ ಎದುರಿಸಲಿದೆ. ಎಪ್ರಿಲ್‌ 23 ಮತ್ತು 24ರಂದು ಜರ್ಮನಿ ಹಾಗೂ ಮೇ 2 ಹಾಗೂ 3ರಂದು ಗ್ರೇಟ್‌ ಬ್ರಿಟನ್‌ ತಂಡವನ್ನು ಆಯಾ ದೇಶಗಳಲ್ಲಿ ಭಾರತ ಎದುರಿಸಲಿದೆ.

ಮೇ 23 ಹಾಗೂ 24ರಂದು ತವರಿನ ಮೈದಾನದಲ್ಲಿ ಪಂದ್ಯಗಳನ್ನು ನ್ಯೂಜಿಲೆಂಡ್‌ ಎದುರು ಆಡಲಿದೆ. ಜೂನ್‌ 5 ಹಾಗೂ 6ರಂದು ಅರ್ಜೆಂಟೀನಾದಲ್ಲಿ ಅಲ್ಲಿಯ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಪ್ರೊ ಲೀಗ್‌ನ ಅಂತಿಮ ಲೆಗ್‌ ಪಂದ್ಯಗಳನ್ನು ಸ್ಪೇನ್‌ನಲ್ಲಿ ಜೂನ್‌ 13 ಹಾಗೂ 14ರಂದು ಭಾರತ ಆಡಲಿದೆ.

ತವರು ನೆಲದಲ್ಲಿ ಭಾರತ ತಂಡ ಒಟ್ಟು ಎಂಟು ಪಂದ್ಯಗಳನ್ನು ಆಡಲಿದೆ.

Post Comments (+)