ಬುಧವಾರ, ಸೆಪ್ಟೆಂಬರ್ 28, 2022
27 °C
ಯೂತ್ ಸ್ಟಾರ್‌ ಕಂಟೆಂಡರ್‌ ಟೇಬಲ್‌ ಟೆನಿಸ್‌

ಟೇಬಲ್‌ ಟೆನಿಸ್‌: ರನ್ನರ್‌ ಅಪ್‌ ಸ್ಥಾನ ಪಡೆದ ದಿಯಾ–ಸ್ವಸ್ತಿಕಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಭರವಸೆಯ ಪ್ರತಿಭೆಗಳಾದ ದಿಯಾ ಚಿತಾಳೆ ಮತ್ತು ಸ್ವಸ್ತಿಕಾ ಘೋಷ್‌, ಟ್ಯುನೀಷಿಯಾದ ಟ್ಯುನಿಸ್‌ನಲ್ಲಿ ನಡೆದ ಡಬ್ಲ್ಯುಟಿಟಿ ಯೂತ್‌ ಸ್ಟಾರ್‌ ಕಂಟೆಂಡರ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಸ್ಥಾನ ಗಳಿಸಿದರು.ಸೋಮವಾರ, 19 ವರ್ಷದೊಳಗಿನವರ ಬಾಲಕಿಯರ ಡಬಲ್ಸ್‌ ಫೈನಲ್‌ನಲ್ಲಿ ಈ ಜೋಡಿ ರಷ್ಯಾದ ಜೋಡಿಯೆದುರು ಮಣಿಯಿತು.

ನತಾಲಿಯಾ ಮಲಿನಿನಾ ಮತ್ತು ಎಲಿಝಬೆತ್‌ ಅಬ್ರಾಮಿಯನ್‌ ಜೋಡಿ 11–3, 11–6, 11– 7 ರಿಂದ ದಿಯಾ– ಸ್ವಸ್ತಿಕಾ ಜೋಡಿಯನ್ನು ಸೋಲಿಸಿತು.

ಇದಕ್ಕೆ ಮೊದಲು ಸೆಮಿಫೈನಲ್‌ನಲ್ಲಿ ಭಾರತದ ಯುವ ಆಟಗಾರ್ತಿಯರು, ಜೆಕ್‌ ರಿಪಬ್ಲಿಕನ್‌ನ ಲಿಂಡಾ ಝಡೆರೊವಾ ಮತ್ತು ಕ್ರೊವೇಷ್ಯಾದ ಹನಾ ಅರಪೋವಿಕ್‌ ಜೋಡಿಯನ್ನು ಸೋಲಿಸಿದ್ದರು.

ಸಿಂಗಲ್ಸ್‌ನಲ್ಲೂ ಭಾರತದ ಆಟಗಾರ್ತಿಯರು ಸ್ಪೂರ್ತಿಯುತ ಪ್ರದರ್ಶನ ನೀಡಿದ್ದರು. ಇಬ್ಬರೂ ಸೆಮಿಫೈನಲ್‌ನಲ್ಲಿ ತೀವ್ರ ಹೋರಾಟ ನೀಡಿದ ನಂತರ 2–3 ಸೆಟ್‌ಗಳ ಅಂತರದಿಂದ ಸೋಲನುಭವಿಸಿದ್ದರು. ದಿಯಾ 8–11, 11–7, 11–6, 8–11, 7–11 ರಿಂದ ರಷ್ಯದ ವ್ಲಾಡಾ ವೊರೊನಿನಾ ಅವರಿಗೆ ಮಣಿದರೆ, ಪ್ರಸಕ್ತ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ ಆಗಿರುವ ಸ್ವಸ್ತಿಕಾ ಕೂಡ ತೀವ್ರ ಸವಾಲಿನ ನಂತರ 11–8, 4–11, 11–9, 3–11, 6–11 ರಿಂದ ಟರ್ಕಿಯ ಏಸ್‌ ಹೆರಾಕ್‌ ಅವರಿಗೆ ಸೋತಿದ್ದರು.

ಕೋವಿಡ್ ಸಾಂಕ್ರಾಮಿಕ ವಿಶ್ವದೆಲ್ಲೆಡೆ ಕಾಣಿಸಿಕೊಂಡ ನಂತರ ಇದು ಭಾರತದ ಆಟಗಾರ್ತಿಯರು ಆಡಿದ ಮೊದಲ ಅಂತರರಾಷ್ಟ್ರೀಯ ಟೂರ್ನಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು